ಕಾಸರಗೋಡು: ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ಹಾಗೂ ವಿಕಲ ಚೇತನರಿಗೆ ಅವರ ವೈಯಕ್ತಿಕ ಸಾಮಥ್ರ್ಯ ಗುರುತಿಸಿ ಅವರಿಗೆ ಸಾಧ್ಯತೆಯಿರುವ ಉಪಜೀವನ ಮಾರ್ಗ ಸೃಷ್ಟಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ತಯಾರಿಸಿದ 'ಐ ಲೀಡ್' ಯೋಜನೆಯನ್ವಯ ಕಾಸರಗೋಡು ಸರ್ಕಾರಿ ಕಾಲೇಜಿನ ಎನ್ನೆಸ್ಸೆಸ್ ಘಟಕದ ಸಹಯೋಗದೊಂದಿಗೆ ವಿಕಲಚೇತನರಿಗೆ ಗೂಡಂಗಡಿಗಳನ್ನು ನಿರ್ಮಿಸಿ ವಿತರಿಸುವ ಯೋಜನೆ ಇದಾಗಿದೆ.
ಎಂಡೋಸಲ್ಫಾನ್ ಪಟ್ಟಿಯಲ್ಲಿ ಒಳಗೊಂಡಿರುವ ಜಿಲ್ಲೆಯ ವಿಕಲಚೇತನರಿಗೆ ಮಾರ್ಚ್ 11 ರವರೆಗೆ ಅರ್ಜಿ ಸಲ್ಲಿಸಬಹುದು. ಒಂದಕ್ಕಿಂತ ಹೆಚ್ಚು ಎಂಡೋಸಲ್ಫಾನ್ ಸಂತ್ರಸ್ತರು ಒಂದು ಕುಟುಂಬದಲ್ಲಿದ್ದರೆ ಅಂತಹ ಕುಟುಂಬಕ್ಕೆ ಅದ್ಯತೆ ನೀಡಲಾಗುವುದು. ಅದಲ್ಲದೆ ಎಂಡೋಪೀಡಿತ ವ್ಯಕ್ತಿಯೇ ಗೂಡಂಗಡಿ ನಡೆಸುವುದಾದರೆ ಅವರಿಗೂ ಆದ್ಯತೆ ನೀಡಲಾಗುತ್ತದೆ. ಅರ್ಜಿಗಳನ್ನು ಜಿಲ್ಲಾ ಸಾಮಾಜಿಕನೀತಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಾಸರಗೋಡು ಸಿವಿಲ್ ಸ್ಟೇಷನ್‍ನಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾ ಸಾಮಾಜಿಕನೀತಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(04994 255074)ಸಂಪರ್ಕಿಸುವಂತೆಪ್ರಕಟಣೆ ತಿಳಿಸಿದೆ.