ಮಂಜೇಶ್ವರ: ಕೇರಳ-ಕರ್ನಾಟಕ ಗಡಿ ಪ್ರದೇಶ ಮೀಂಜ ಪಂಚಾಯಿತಿಯ ಬೇರಿಕೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 112.32ಲೀ. ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬೇರಿಕೆ ನಿವಾಸಿ ರಾಧಾಕೃಷ್ಣ ಎಂಬಾತನನ್ನು ಬಂಧಿಸಿದ್ದಾರೆ.
ಕಾಸರಗೋಡು ಅಬಕಾರಿ ಎನ್‍ಫೋರ್ಸ್‍ಮೆಂಟ್ ಆಂಡ್ ಆ್ಯಂಟಿ ನಾರ್ಕೋಟಿಕ್ಸ್ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ. ಲೋಕಸಭಾ ಚುನಾವಣೆ ದಿನ ಸಮೀಪಿಸುತ್ತಿದ್ದಂತೆ ಅನಧಿಕೃತ ಮದ್ಯ, ಗಾಂಜಾ ಸೇರಿದಂತೆ ಮಾದಕ ಪದಾರ್ಥ ಸಾಗಾಟ ಹೆಚ್ಚಾಗುತ್ತಿರುವುದನ್ನು ಮನಗಂಡು ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ ಸಂಚರಿಸುತ್ತಿದ್ದ ಕೇರಳ ರಸ್ತೆಸಾರಿಗೆ ಸಂಸ್ಥೆ ಬಸ್ಸಿನಿಂದ 8.640ಲೀ. ವಿದೇಶಿ ಮದ್ಯ ವಶಪಡಿಸಿಕೊಳ್ಳಲಾಗಿದೆ. 180ಎಂಎಲ್‍ನ 48ಪ್ಯಾಕೆಟ್‍ಗಳನ್ನು ಚೀಲದಲ್ಲಿ ತುಂಬಿ, ಸೀಟಿನಡಿಯಿರಿಸಲಾಗಿತ್ತು. ಆರೋಪಿ ಪತ್ತೆಯಾಗಿಲ್ಲ.