ನವದೆಹಲಿ: ಕವಿ, ಸಾಹಿತಿ ಪ್ರಭಾ ವರ್ಮ ಅವರಿಗೆ ಸರಸ್ವತಿ ಸಮ್ಮಾನ್ ಘೋಷಿಸಲಾಗಿದೆ. ಅತ್ಯಂತ ದೊಡ್ಡ ಸಾಹಿತ್ಯ ಪ್ರಶಸ್ತಿಯಾದ ಸರಸ್ವತಿ ಸಮ್ಮಾನ್ ಅನ್ನು ಕೆಕೆ ಬಿರ್ಲಾ ಫೌಂಡೇಶನ್ ನೀಡುತ್ತದೆ.
ರೌದ್ರ ಸಾತ್ವಿಕಂ ಎಂಬ ಕೃತಿಗೆ ಪ್ರಶಸ್ತಿ ಒದಗಿಬಂದಿದೆ. ಪ್ರಶಸ್ತಿಯು 15 ಲಕ್ಷ ರೂ. ನಗದು, ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. 12 ವರ್ಷಗಳ ನಂತರ ಮಲಯಾಳಂಗೆ ಈ ಪ್ರಶಸ್ತಿ ಲಭಿಸಿದೆ.
ರಾಷ್ಟ್ರಮಟ್ಟದಲ್ಲಿ ಇದೊಂದು ದೊಡ್ಡ ಮನ್ನಣೆಯಾಗಿದ್ದು, ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದು ಪ್ರಭಾ ವರ್ಮಾ ಹೇಳಿದ್ದಾರೆ. ಬಾಲಾಮಣಿ ಅಮ್ಮ, ಅಯ್ಯಪ್ಪಪಣಿಕ್ಕರ್ ಮತ್ತು ಸುಗತಕುಮಾರಿ ಈ ಹಿಂದೆ ಈ ಪ್ರಶಸ್ತಿಗೆ ಭಾಜನರಾಗಿದ್ದರು.