HEALTH TIPS

ಉದ್ಯೋಗ ಖಾತ್ರಿ ಕೂಲಿ ಹೆಚ್ಚಳದಲ್ಲಿ ಕೇರಳಕ್ಕೆ ತಾರಮ್ಯ: 13 ರೂ. ಹೆಚ್ಚಳ ಕೇರಳಕ್ಕೆ ಸಾಕಾಗುವುದಿಲ್ಲ: ಸಚಿವ ಎಂ.ಬಿ.ರಾಜೇಶ್

                 ತಿರುವನಂತಪುರಂ: ಕೇಂದ್ರ ಘೋಷಿಸಿರುವ ಉದ್ಯೋಗ ಖಾತ್ರಿ ಕೂಲಿ ಹೆಚ್ಚಳ ಸಾಕಾಗುವುದಿಲ್ಲ ಎಂದು ಸ್ಥಳೀಯಾಡಳಿತ ಸಚಿವ ಎಂ.ಬಿ.ರಾಜೇಶ್ ಹೇಳಿದ್ದಾರೆ. ಇತರ ರಾಜ್ಯಗಳು ದೊಡ್ಡ ಪ್ರಮಾಣದ ವೇತನ ಬದಲಾವಣೆಗಳನ್ನು ಕಂಡರೆ, ಕೇರಳಕ್ಕೆ ನೀಡಿದ ಹೆಚ್ಚಳ ತುಂಬಾ ಚಿಕ್ಕದಾಗಿದೆ. ಕೇಂದ್ರ ಸರ್ಕಾರ ಕೇರಳದಲ್ಲಿ ಕೌಶಲ್ಯರಹಿತ ಕಾರ್ಮಿಕರ ವೇತನವನ್ನು ಕೇವಲ 333 ರೂ.ನಿಂದ 346 ರೂ.ಗೆ ಹೆಚ್ಚಿಸಿದೆ. ಕೇರಳ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದಲ್ಲಿ 316 ರೂ.ನಿಂದ 349 ರೂ.ಗೆ ಏರಿಕೆಮಾಡಿದ್ದು, 33 ರೂ. ಹೆಚ್ಚು ನೀಡಲಾಗಿದೆ. ತಮಿಳುನಾಡಿಗೆ 25 (8.5%). ಗೋವಾದಲ್ಲಿ ರೂ 34 (10.56%) ಮತ್ತು ತೆಲಂಗಾಣ ಮತ್ತು ಆಂಧ್ರ ರೂ 28 (10.29%),ಹೆಚ್ಚಳವಾಗಿದೆ. ಕೇರಳವು ಕೇವಲ 13 ರೂಗಳಲ್ಲಿ ಕೇವಲ 3.9% ಹೆಚ್ಚಳವನ್ನು ಕಂಡಿದೆ ಎಂದು ಸಚಿವರು ಸೂಚಿಸಿದರು.

                 ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2024-25ನೇ ಹಣಕಾಸು ವಷರ್Àದ ಕೌಶಲ್ಯರಹಿತ ಕಾರ್ಮಿಕರ ವೇತನವನ್ನು ಪರಿಷ್ಕರಿಸಿ ಕೇಂದ್ರ ಸರ್ಕಾರ ಗುರುವಾರ ಆದೇಶ ಹೊರಡಿಸಿತ್ತು.

                   ತಾರತಮ್ಯದ ನಡುವೆಯೂ ಕೇರಳ ಹಿಂದಿನ ಆರ್ಥಿಕ ವರ್ಷದಲ್ಲಿ 9.65 ಕೋಟಿ ಕೆಲಸದ ದಿನಗಳನ್ನು ಸಾಧಿಸಿತ್ತು ಆದರೆ ಕೇಂದ್ರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಆರಂಭದಲ್ಲಿ ಕೇವಲ 6 ಕೋಟಿ ಕೆಲಸದ ದಿನಗಳನ್ನು ನಿಗದಿಪಡಿಸಿದೆ ಎಂದು ಸಚಿವರು ಹೇಳಿದರು. ಆದರೆ ಅಕ್ಟೋಬರ್ ತಿಂಗಳಲ್ಲೇ ಆ ಗುರಿಯನ್ನು ರಾಜ್ಯ ಸಾಧಿಸಿದೆ. ನೇರವಾಗಿ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ನಿರಂತರ ಒತ್ತಡ ಹೇರಿದ್ದರ ಫಲವಾಗಿ ಕೆಲಸದ ದಿನಗಳನ್ನು 8 ಕೋಟಿಗೆ ಹೆಚ್ಚಿಸಲಾಗಿದೆ. 2023ರ ಡಿಸೆಂಬರ್‍ನಲ್ಲಿ ಕೇರಳ ಕೂಡ ಈ ಗುರಿಯನ್ನು ಸಾಧಿಸಿದೆ. ನಂತರದ ಪ್ರಯತ್ನಗಳ ಭಾಗವಾಗಿ ಅದನ್ನು 9.50 ಕೋಟಿಗೆ ಮತ್ತು ನಂತರ 10.50 ಕೋಟಿಗೆ ಏರಿಸಲಾಯಿತು. ರಾಜ್ಯವು ಇಲ್ಲಿಯವರೆಗೆ 9.88 ಕೋಟಿ ಉದ್ಯೋಗ ದಿನಗಳನ್ನು ಸೃಷ್ಟಿಸಿದೆ.

                ಅಸಂಘಟಿತ ವಲಯದಲ್ಲಿ ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ರಾಜ್ಯಗಳಲ್ಲಿ ಕೇರಳವೂ ಒಂದು. ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಿಗೆ ನೀಡುವ ಕನಿಷ್ಠ ವೇತನಕ್ಕೆ ಹೋಲಿಸಿದರೆ ಉದ್ಯೋಗ ಖಾತರಿ ಕಾರ್ಮಿಕರಿಗೆ ಅತ್ಯಂತ ಕಡಮೆ ವೇತನ ನೀಡಲಾಗುತ್ತದೆ. ತರ್ಕ ಮತ್ತು ವಾಸ್ತವದ ಅರಿವೇ ಇಲ್ಲದ ಈ ಕ್ರಮವನ್ನು ಕೇರಳದ ವಿರುದ್ಧದ ತಾರತಮ್ಯವನ್ನಷ್ಟೇ ಎಂಬಂತೆ  ನೋಡಬಹುದು. ವೇತನ ಹೆಚ್ಚಳದಲ್ಲಿನ ಈ ತಾರತಮ್ಯ ಕ್ರಮವನ್ನು ಸರಿಪಡಿಸಿ ನ್ಯಾಯಯುತವಾಗಿ ಹೆಚ್ಚಳ ಮಾಡಬೇಕು. 750 ಕೋಟಿ, ಜನವರಿ ತಿಂಗಳ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. 100% ಸಕ್ರಿಯ ಕಾರ್ಮಿಕರಿಗೆ ಆಧಾರ್ ಲಿಂಕ್ ಮಾಡುವಿಕೆಯನ್ನು ಪೂರ್ಣಗೊಳಿಸಿದ ದೇಶದ ಮೊದಲ ರಾಜ್ಯ ಕೇರಳವಾಗಿದೆ. ಉದ್ಯೋಗಸ್ಥ ಕಾರ್ಮಿಕರಿಗೆ 1000 ರೂಪಾಯಿ ಹಬ್ಬದ ಭತ್ಯೆ ನೀಡಿ ಕಲ್ಯಾಣ ನಿಧಿ ಸ್ಥಾಪಿಸಿರುವ ಏಕೈಕ ರಾಜ್ಯ ಕೇರಳವಾಗಿದೆ ಎಂದು ಸಚಿವರು ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries