HEALTH TIPS

ನಾಗ್ಪುರ: 15ರಿಂದ ಆರ್‌ಎಸ್‌ಎಸ್ ಸಮಾವೇಶ

             ನಾಗ್ಪುರ: ನಾಗ್ಪುರದ 'ಸ್ಮೃತಿ ಭವನ'ದಲ್ಲಿ ಇದೇ 15ರಿಂದ 17ರವರೆಗೆ ಮೂರು ದಿನಗಳ ಕಾಲ ಆರ್‌ಎಸ್‌ಎಸ್ ನಾಯಕತ್ವದ ಬಹುಮುಖ್ಯವಾದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಬುಧವಾರ ತಿಳಿಸಿದ್ದಾರೆ.

            ಈ ಸಮಾವೇಶದಲ್ಲಿ ರಾಮಮಂದಿರ ಕುರಿತು ಗೊತ್ತುವಳಿ ಅಂಗೀಕಾರ ಹಾಗೂ ದೇಶದ ಹಲವು ವಿಚಾರಗಳ ಕುರಿತು ಚರ್ಚಿಸಲಾಗುವುದು.

             ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿರುವ ಸಂಘಟನೆಗಳ 1,529 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

             ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಬೇಕರ್, 'ನಾಗ್ಪುರದಲ್ಲಿ ಆರು ವರ್ಷಗಳ ಬಳಿಕ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ. 2025ರ ವೇಳೆಗೆ ಆರ್‌ಎಸ್‌ಎಸ್ ಸಂಘಟನೆಗೆ 100 ವರ್ಷ ಪೂರ್ಣವಾಗಲಿದೆ. ಆ ಸಂದರ್ಭದಲ್ಲಿ ದೇಶದಾದ್ಯಂತ 68 ಸಾವಿರ ಇರುವ ಆರ್‌ಎಸ್‌ಎಸ್ ಸಂಘದ ಶಾಖೆಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಏರಿಸಬೇಕು ಎನ್ನುವುದೂ ಸೇರಿದಂತೆ 2024-25ರ ಅವಧಿಯಲ್ಲಿ ಏನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಗುವುದು' ಎಂದು ಹೇಳಿದ್ದಾರೆ.

            ಸಂಘದ ಅಖಿಲ ಭಾರತೀಯ ಕಾರ್ಯಕಾರಣಿ ಮಂಡಳಿಯಿಂದ ಚುನಾವಣೆಗೆ ಸದಸ್ಯರನ್ನು ಆಯ್ಕೆ ಮಾಡುವುದು ಮತ್ತು ಪ್ರಧಾನ ಕಾರ್ಯದರ್ಶಿಗಳ ಕುರಿತು ಚರ್ಚೆಯಾಗಲಿದೆ. 2023-24ರ ಅವಧಿಯಲ್ಲಿ ಸಂಘ ಮಾಡಿದ ಎಲ್ಲಾ ಕಾರ್ಯಗಳು ಮತ್ತು ಸೇವಾ ಕಾರ್ಯಗಳನ್ನು ವಿಮರ್ಶೆಗೊಳಪಡಿಸಲಾಗುವುದು ಎಂದಿದ್ದಾರೆ.

             ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, 36 ಸಂಘಗಳ ಕಾರ್ಯದರ್ಶಿಗಳು ಮತ್ತು ಮುಖ್ಯಸ್ಥರು ಈ ಪ್ರತಿನಿಧಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries