ಪಾಲಕ್ಕಾಡ್: ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕೇರಳಕ್ಕೆ ಭೇಟಿ ನೀಡಲಿದ್ದಾರೆ. 15ರಂದು ಸಂಜೆ 5 ಗಂಟೆಗೆ ಪಾಲಕ್ಕಾಡ್ ನಲ್ಲಿ ಪ್ರಧಾನಿ ನೇತೃತ್ವದಲ್ಲಿ ರೋಡ್ ಶೋ ನಡೆಯಲಿದೆ.
ಅಭ್ಯರ್ಥಿ ಘೋಷಣೆಯಾದ ನಂತರ ಪ್ರಧಾನಿಯವರು ಕೇರಳಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಬಿಜೆಪಿಯ ಎ ವರ್ಗ ಕ್ಷೇತ್ರದ ಪಾಲಕ್ಕಾಡ್ ಹಿರಿಯ ನಾಯಕ ಸಿ. ಕೃಷ್ಣಕುಮಾರ್ ಅಭ್ಯರ್ಥಿ. ಎನ್.ಡಿ.ಎ. ಪಾಲಕ್ಕಾಡ್ ಚುನಾವಣಾ ಸಮಿತಿ ಕಚೇರಿಯನ್ನು ಈಗಾಗಲೇ ತೆರೆಯಲಾಗಿದೆ.