ತಿರುವನಂತಪುರ: ಶಾಲಾ ಶಿಕ್ಷಣ ಸುಧಾರಣೆ ಅಧ್ಯಯನಕ್ಕೆ ನೇಮಕಗೊಂಡ ಡಾ. ಎಂ.ಎ. ಖಾದರ್ ಸಮಿತಿ ಸಿದ್ಧಪಡಿಸಿದ ವರದಿಯ ಒಂದು ಪುಟಕ್ಕೆ ಖರ್ಚಾದ ಮೊತ್ತ ಕೇಳಿ ಪ್ರತಿಯೊಬ್ಬರೂ ಬೆಚ್ಚಿಬಿದ್ದಿದ್ದಾರೆ.
ಶಿಕ್ಷಣ ಇಲಾಖೆಯ ವರದಿಯನ್ನು ತಯಾರಿಸಲು 400,000 ಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. ವಿದ್ಯಾರ್ಥಿಯೋರ್ವನ ಮಧ್ಯಾಹ್ನದ ಊಟಕ್ಕೆ ಪ್ರತಿ ಮಗುವಿಗೆ 8 ರೂ.ಖರ್ಚುಮಾಡಲೂ ಹಿಂದೇಟು ಹಾಕುವ ಸರ್ಕಾರ ಇದೀಗ ಇಷ್ಟೊಂದು ಮತ್ತು ಖರ್ಚುಮಾಡಿರುವುದು ಅಚ್ಚರಿಮೂಡಿಸಿದೆ. ಅಂದರೆ ಒಂದು ಪುಟ ವರದಿಗೆ ಸರಾಸರಿ 1,671 ರೂ.ಎಂಬಂತೆ ವ್ಯರ್ಥದ ವರದಿಗೆ ಸರ್ಕಾರ ವ್ಯಯಿಸಿದೆ.
ಡಿಟಿಪಿ ವೆಚ್ಚ ರೂ.4,17,789 ಮಂಜೂರಾಗಿದೆ ಎಂದು ವಿಧಾನಸಭೆಯ ಪ್ರಶ್ನೆಗೆ ಸಚಿವ ವಿ.ಶಿವನ್ ಕುಟ್ಟಿ ನೀಡಿದ ಉತ್ತರದಲ್ಲಿ ತಿಳಿಸಲಾಗಿದೆ. ಈ ಮೊತ್ತವು 125 ಪುಟಗಳ ಮೊದಲ ಭಾಗ ಮತ್ತು ಬಿಡುಗಡೆಯಾಗದ ಎರಡನೇ ಭಾಗದ ಡಿಟಿಪಿ ವೆಚ್ಚವಾಗಿದೆ. ಮುದ್ರಣಕ್ಕೆ 72,461 ರೂ., ಅನುವಾದಕ್ಕೆ 18,000 ರೂ.ವೆಚ್ಚ ಎನ್ನಲಾಗಿದೆ.
ಮೂವರು ಸದಸ್ಯರ ಖಾದರ್ ಸಮಿತಿಗೆ ಸರ್ಕಾರ 14,16,814 ರೂ.ವ್ಯಯಿಸಿದೆ. ಅಧ್ಯಕ್ಷ ಡಾ. ಎಂ.ಎ. ಖಾದರ್ ಪ್ರತಿ ಸಿಟ್ಟಿಂಗ್ ಗೆ 2000 ರೂ., 69 ಸಿಟ್ಟಿಂಗ್ ಗೆ 1.38 ಲಕ್ಷ ರೂ., ಪ್ರಯಾಣ ಭತ್ಯೆಯಾಗಿ 67,508 ರೂ. ಡಾ.ಸಿ ರಾಮಕೃಷ್ಣನ್ ಅವರು 1.52 ಲಕ್ಷ ರೂ. ಮತ್ತು 76 ಸಿಟ್ಟಿಂಗ್‍ಗಳಿಗೆ ಪ್ರಯಾಣ ಭತ್ಯೆಯಾಗಿ 16,838 ರೂ. ಜಿ.ಜ್ಯೋತಿಚೂಡನ್ ಅವರು 70 ಸಿಟ್ಟಿಂಗ್‍ಗೆ 1.40 ಲಕ್ಷ ರೂ.ಪಡೆದಿದ್ದಾರೆ. ಇವರು ಯಾವುದೇ ಪ್ರಯಾಣ ಭತ್ಯೆ ಪಡೆದಿಲ್ಲ. ಇದಲ್ಲದೇ ಸಮಿತಿಗೆ ಟ್ಯಾಕ್ಸಿ ದರವಾಗಿ 1,21,690 ರೂ.ನೀಡಲಾಗಿದೆ. ವರದಿಯ ಎರಡನೇ ಭಾಗವನ್ನು ಸರ್ಕಾರ ಸಾರ್ವಜನಿಕಗೊಳಿಸಿಲ್ಲ. ಆದರೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ರಯಾಣ ಭತ್ಯೆ ಸೇರಿದಂತೆ ಮೊತ್ತವನ್ನೂ ಮಂಜೂರು ಮಾಡಲಾಗಿದೆ.