ಕಾಸರಗೋಡು: ಲೋಕಸಃಂ ಚುನಾವಣೆಗೆ ಸಂಬಂಧಿಸಿದ ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ದೂರುಗಳು ಮತ್ತು ಅಕ್ರಮಗಳ ಬಗ್ಗೆ ವರದಿ ಮಾಡಲು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮೊಬೈಲ್ ಸಿ-ವಿಜಿಲ್ ಆ್ಯಪ್ ಮೂಲಕ ಜಿಲ್ಲೆಯಲ್ಲಿ 17 ದೂರು ಲಭಿಸಿದ್ದು, ಇವುಗಳಲ್ಲಿ 15 ದೂರುಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ.
ಅಪೂರ್ಣವಾಗಿದ್ದ ಎರಡು ದೂರುಗಳನ್ನು ಕೈಬಿಡಲಾಗಿದೆ. ತ್ರಿಕ್ಕರಿಪುರ ಕ್ಷೇತ್ರದಿಂದ ಒಂಭತ್ತು, ಕಾಸರಗೋಡು ಕ್ಷೇತ್ರದಿಂದ ನಾಲ್ಕು, ಉದುಮ ಮತ್ತು ಕಾಞಂಗಾಡು ಕ್ಷೇತ್ರದಿಂದ ತಲಾ ಒಂದು ದೂರು ಲಭಿಸಿದೆ. ಮಂಜೇಶ್ವರ ಕ್ಷೇತ್ರದಿಂದ ಇದುವರೆಗೆ ಯಾವುದೇ ದೂರುಗಳು ಲಭಿಸಿಲ್ಲ. ಮಾರ್ಚ್ 16 ಸಂಜೆ ಚುನಾವಣಾ ಅಧಿಸೂಚನೆ ಬಂದ ನಂತರ ಜಿಲ್ಲೆಯಲ್ಲಿ ಸಿ-ವಿಜಿಲ್ ಆ್ಯಪ್ ಕಾರ್ಯಾರಂಭಿಸಿದೆ. ಸರ್ಕಾರದ ಅಧೀನದಲ್ಲಿರುವ ಪ್ರದೇಶದಲ್ಲಿ ಅನಧಿಕೃತವಾಗಿ ಗೋಡೆ ಬರಹ, ಪ್ರಚಾರದ ಪೆÇೀಸ್ಟರ್, ಫ್ಲಕ್ಸ್ ಗಳನ್ನು ಲಗತ್ತಿಸುವುದರ ವಿರುದ್ಧದ ದೂರುಗಳು ಇದುವರೆಗೆ ಬಂದಿರುವುದಾಗಿ ಜಿಲ್ಲಾ ನಿಯಂತ್ರಣ ಘಟಕ (ಕಂಟ್ರೋಲ್ ರೂಂ) ನೋಡಲ್ ಅಧಿಕಾರಿ ಕೆ.ವಿ.ಶ್ರುತಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಸಂಬಂಧಿಸಿ ನೀತಿ ಸಂಹಿತೆ ಉಲ್ಲಂಘನೆಗೆ ದೂರುಗಳು ಮತ್ತು ಅಕ್ರಮಗಳ ಬಗ್ಗೆ ಸಾರ್ವಜನಿಕರು ಸಿ-ವಿಜಿಲ್ ಆ್ಯಪ್ ಮೂಲಕ ವರದಿ ಮಾಡಬಹುದಾಗಿದೆ. ಪಾರದರ್ಶಕ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಲ್ಳುವ ನಿಟ್ಟಿನಲ್ಲಿ ಈ ವಿಧಾನ ಜಾರಿಗೊಳಿಸಲಾಗಿದೆ. ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ಜಿಪಿಎಸ್ ಸೌಲಭ್ಯವಿರುವ ಯಾವುದೇ ಸ್ಮಾರ್ಟ್ ಫೆÇೀನಿನಲ್ಲಿ ಸಿ-ವಿಜಿಲ್ ಆ್ಯಪ್‍ನ್ನು ಸ್ಥಾಪಿಸಬಹುದಾಗಿದೆ.