ನವದೆಹಲಿ: ಆಕ್ಷೇಪಾರ್ಹ ಮತ್ತು ಅಶ್ಲೀಲ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿರುವ ಕಾರಣಕ್ಕೆ 18 ಒಟಿಟಿ ವೇದಿಕೆಗಳಿಗೆ ಕೇಂದ್ರ ಸರ್ಕಾರವು ಗುರುವಾರ ನಿರ್ಬಂಧ ಹೇರಿದೆ.
ನವದೆಹಲಿ: ಆಕ್ಷೇಪಾರ್ಹ ಮತ್ತು ಅಶ್ಲೀಲ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿರುವ ಕಾರಣಕ್ಕೆ 18 ಒಟಿಟಿ ವೇದಿಕೆಗಳಿಗೆ ಕೇಂದ್ರ ಸರ್ಕಾರವು ಗುರುವಾರ ನಿರ್ಬಂಧ ಹೇರಿದೆ.
18 ಒಟಿಟಿ ವೇದಿಕೆಗಳ ಜೊತೆಗೆ 19 ವೆಬ್‌ಸೈಟ್‌ಗಳು, 10 ಆಯಪ್‌ಗಳು (ಏಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆಯಪ್‌ಗಳು ಮತ್ತು ಮೂರು ಆಯಪಲ್ ಆಯಪ್ ಸ್ಟೋರ್‌ನಲ್ಲಿ ಇರುವಂಥವು) ಮತ್ತು 57 ಸಾಮಾಜಿಕ ಮಾಧ್ಯಮ ಖಾತೆಗಳಿಗೂ ನಿರ್ಬಂಧ ಹೇರಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೇಳಿಕೆ ತಿಳಿಸಿದೆ.