ನವದೆಹಲಿ: ರಾಜ್ಯಸಭೆಯ 225 ಸದಸ್ಯರ ಒಟ್ಟು ಆಸ್ತಿ ₹19,602 ಕೋಟಿ. ಈ ಪೈಕಿ 31 ಮಂದಿ ಕೋಟ್ಯಧೀಶರು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ.
ಇದೇ ವೇಳೆ, ಒಟ್ಟು ಸದಸ್ಯರ ಪೈಕಿ ವಿವಿಧ ಪಕ್ಷಗಳ 75 ಮಂದಿ (ಶೇ 33ರಷ್ಟು) ವಿರುದ್ಧ ಕ್ರಿಮಿನಲ್ ಅಪರಾಧ ಪ್ರಕರಣಗಳು ದಾಖಲಾಗಿವೆ.
ಇಬ್ಬರು ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣ ಮತ್ತು ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿರುವುದಾಗಿ ಅವರು ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ ಎಂದು ತಿಳಿಸಿದೆ.
ಪಕ್ಷ; ರಾಜ್ಯಸಭಾ ಸದಸ್ಯರ ಒಟ್ಟು ಆಸ್ತಿ (₹ ಕೋಟಿಗಳಲ್ಲಿ)
ಬಿಜೆಪಿ; 3,360
ಕಾಂಗ್ರೆಸ್; 1,139
ವೈಎಸ್‌ಆರ್‌ಸಿಪಿ; 3,934
ಟಿಆರ್‌ಎಸ್; 5,534
ಎಎಪಿ; 1,148
ಪಕ್ಷ; ಒಟ್ಟು ರಾಜ್ಯಸಭಾ ಸದಸ್ಯರು; ಕ್ರಿಮಿನಲ್ ಪ್ರಕರಣ ದಾಖಲಾಗಿರುವವರ ಸಂಖ್ಯೆ (ಶೇ)
ಬಿಜೆಪಿ; 90; 23
ಕಾಂಗ್ರೆಸ್; 28;50
ಟಿಎಂಸಿ; 13;38
ಆರ್‌ಜೆಡಿ; 6;67
ಸಿಪಿಎಂ; 5;80
ಎಎಪಿ; 10;30
ವೈಎಸ್‌ಆರ್‌ಸಿಪಿ;11;36
ಡಿಎಂಕೆ; 10;20
ಪಕ್ಷ; 100 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ಸದಸ್ಯರ ಸಂಖ್ಯೆ
ಬಿಜೆಪಿ; 9
ಕಾಂಗ್ರೆಸ್; 4
ವೈಎಸ್‌ಆರ್‌ಸಿಪಿ; 5
ಎಎಪಿ; 2
ಟಿಆರ್‌ಎಸ್; 3
ಆರ್‌ಜೆಡಿ; 2
ರಾಜ್ಯ; ಅಪರಾಧ ಹಿನ್ನೆಲೆ ಹೊಂದಿರುವ ಸದಸ್ಯರ ಸಂಖ್ಯೆ
ಮಹಾರಾಷ್ಟ್ರ; 11
ಬಿಹಾರ;8
ಉತ್ತರ ಪ್ರದೇಶ; 9
ತಮಿಳುನಾಡು; 6
ಕೇರಳ; 6
ಪಶ್ಚಿಮ ಬಂಗಾಳ; 7