ಕಾಸರಗೋಡು: ಅಂಬಲತ್ತರ ಗುರುಪುರದಲ್ಲಿ ಮುಚ್ಚಿದ್ದ ಮನೆಯಿಂದ ನಕಲಿ ನೋಟು ವಶಪಡಿಸಲಾಗಿದೆ. ಮಾರುಕಟ್ಟೆಯಿಂದ ಹಿಂಪಡೆದಿದ್ದ 2000 ರೂಪಾಯಿ ನೋಟು ಸೇರಿದಂತೆ 7.25 ಕೋಟಿ ಕಪ್ಪುಹಣವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಪಾಣತ್ತೂರು ಮೂಲದ ಅಬ್ದುಲ್ ರಜಾಕ್ ಎಂಬಾತ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಪೋಲೀಸರಿಗೆ ಸಿಕ್ಕ ರಹಸ್ಯ ಮಾಹಿತಿಯ ನಂತರ ತನಿಖೆ ನಡೆಸಿದಾಗ ಕೋಟಿಗಟ್ಟಲೆ ಕಪ್ಪುಹಣ ಪತ್ತೆಯಾಗಿದೆ. ಘಟನೆಯಲ್ಲಿ ಅಬ್ದುಲ್ ರಜಾಸಾಖ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಮತ್ತು ವಿದೇಶದಲ್ಲಿರುವ ಮಾಹಿತಿ ಲಭಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಅಬ್ದುಲ್ ರಜಾಕ್ ಇತ್ತೀಚೆಗೆ ಇಲ್ಲಿಗೆ ಆಗಮಿಸಿದ್ದರು ಎನ್ನಲಾಗಿದೆ. ಘಟನೆ ಕುರಿತು ಪೋಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಯಾವ ಸಂದರ್ಭದಲ್ಲಿ ಹಣ ಬಿಟ್ಟಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ.