ನವದೆಹಲಿ: ಬಾಂಗ್ಲಾದೇಶದ 43 ನಾಗರಿಕ ಸೇವೆಗಳ ಅಧಿಕಾರಿಗಳಿಗೆ ರಾಷ್ಟ್ರೀಯ ಉತ್ತಮ ಆಡಳಿತ ಕೇಂದ್ರ (NCGG)ದಲ್ಲಿ ಎರಡು ವಾರಗಳ ತರಬೇತಿ ಕಾರ್ಯಾಗಾರ ಸೋಮವಾರದಿಂದ ಆರಂಭವಾಗಿದೆ.
ನವದೆಹಲಿ: ಬಾಂಗ್ಲಾದೇಶದ 43 ನಾಗರಿಕ ಸೇವೆಗಳ ಅಧಿಕಾರಿಗಳಿಗೆ ರಾಷ್ಟ್ರೀಯ ಉತ್ತಮ ಆಡಳಿತ ಕೇಂದ್ರ (NCGG)ದಲ್ಲಿ ಎರಡು ವಾರಗಳ ತರಬೇತಿ ಕಾರ್ಯಾಗಾರ ಸೋಮವಾರದಿಂದ ಆರಂಭವಾಗಿದೆ.
ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವಾಲಯದ ಒಡಂಬಡಿಕೆಯಡಿ ಆಯೋಜನೆಗೊಂಡಿರುವ ತರಬೇತಿ ಕಾರ್ಯಾಗಾರ ಮಾರ್ಚ್ 15ರವರೆಗೂ ನಡೆಯಲಿದೆ.
ಈವರೆಗೂ ಸುಮಾರು 2,500ರಷ್ಟು ಬಾಂಗ್ಲಾದೇಶದ ಅಧಿಕಾರಿಗಳಿಗೆ NCGG ತರಬೇತಿ ನೀಡಿದೆ. ಈ ಬಾರಿ ತರಬೇತಿಯಲ್ಲಿ ಉಪ ಕಾರ್ಯದರ್ಶಿಗಳು, ಉಪ ಜಿಲ್ಲಾ ನಿರ್ಬಾಹಿ ಅಧಿಕಾರಿಗಳು, ಸಹ ಉಪ ಆಯುಕ್ತರು, ಹಿರಿಯ ಸಹಾಯಕ ಆಯುಕ್ತರು ಮತ್ತು ಉಪವಿಭಾಗಾಧಿಕಾರಿ ಹುದ್ದೆಯಲ್ಲಿರುವವರು ಈ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.
ಬಾಂಗ್ಲಾದೇಶದ ಈ ಅಧಿಕಾರಿಗಳಿಗೆ ಮಸೂರಿ ಮತ್ತು ನವದೆಹಲಿಯಲ್ಲಿ ತರಬೇತಿ ಆಯೋಜನೆಗೊಂಡಿದೆ ಎಂದು ತರಬೇತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ NCGG ಮಹಾನಿರ್ದೇಶಕ ವಿ.ಶ್ರೀನಿವಾಸ್, 'ಕೇಂದ್ರ ಮತ್ತು ರಾಜ್ಯಗಳಲ್ಲಿ ಪರಿಣಾಮಕಾರಿ ಆಡಳಿತ ಅನುಷ್ಠಾನಗೊಳಿಸಲು ಅಗತ್ಯವಿರುವ ತರಬೇತಿಯನ್ನು ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ' ಎಂದರು.
ವಿದೇಶಾಂಗ ಸಚಿವಾಲಯವು NCGG ಮೂಲಕ 17 ರಾಷ್ಟ್ರಗಳ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಿದೆ.