HEALTH TIPS

200 ಕೋಟಿ ಕಲೆಕ್ಷನ್ ಮಾಡಿದ 'ಮಂಜುಮ್ಮೆಲ್ ಬಾಯ್ಸ್'; ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅನೇಕ ದಾಖಲೆಗಳನ್ನು ಮುರಿದ ಮೊದಲ ಸಿನಿಮಾ!

              'ಮಂಜುಮ್ಮೆಲ್ ಬಾಯ್ಸ್' ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ 200 ಕೋಟಿ ಕ್ಲಬ್‌ ಸೇರಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರವು ಫೆಬ್ರವರಿ 22 ರಂದು ಚಿತ್ರಮಂದಿರಗಳನ್ನು ಪ್ರವೇಶಿಸಿತು. ಮೊದಲ ದಿನದಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದ ಈ ಚಿತ್ರ ಕೇರಳ ಮಾತ್ರಲ್ಲದೆ ತಮಿಳುನಾಡಿನಲ್ಲೂ ಭರ್ಜರಿ ಯಶಸ್ಸು ಕಾಣುತ್ತಿದೆ.

            ತಮಿಳು ಡಬ್ಬಿಂಗ್ ಇಲ್ಲದೆಯೇ ತಮಿಳುನಾಡಿನಲ್ಲಿ ಐವತ್ತು ಕೋಟಿ ಗಳಿಸಿದ ಮೊದಲ ಪರಭಾಷಾ ಚಿತ್ರ ಎಂಬ ದಾಖಲೆಯನ್ನೂ ಮಂಜುಮ್ಮೆಲ್ ಬರೆದಿದೆ. ಕೇರಳದ ಚಿತ್ರಮಂದಿರಗಳಿಂದ 60 ಕೋಟಿ ರೂ, ಉಳಿದ ಕಡೆ 68 ಕೋಟಿ, ಕರ್ನಾಟಕದಿಂದ 11 ಕೋಟಿ ರೂ. ಬಾಚಿದೆ. ಸಿನಿ ತಜ್ಞರ ಪ್ರಕಾರ ಚಿತ್ರದ ಡಬ್ಬಿಂಗ್ ಆವೃತ್ತಿಗಳು ಬಿಡುಗಡೆಯಾಗುವುದರೊಂದಿಗೆ ಕಲೆಕ್ಷನ್ ದ್ವಿಗುಣಗೊಳ್ಳಬಹುದು.

'ಮಂಜುಮ್ಮೆಲ್ ಬಾಯ್ಸ್' ಮಲಯಾಳಂನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದ್ದು, ಕಳೆದ ಒಂದು ವರ್ಷದಿಂದ ನಂಬರ್ ಒನ್ ಸ್ಥಾನದಲ್ಲಿದ್ದ ಜೋಸೆಫ್ ನಿರ್ದೇಶನದ, ಟೊವಿನೋ ಥಾಮಸ್​ ನಟನೆಯ 'ಜೂಡ್ ಆಂಥನಿ' ಚಿತ್ರದ ದಾಖಲೆಯನ್ನು ಬ್ರೇಕ್ ಮಾಡಿದೆ. 2018ರಲ್ಲಿ ಬಿಡುಗಡೆಯಾದ 'ಜೂಡ್ ಆಂಥನಿ' ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 175 ಕೋಟಿ ಕಲೆಕ್ಷನ್ ಮಾಡಿತ್ತು.

'ಮಂಜುಮ್ಮೆಲ್ ಬಾಯ್ಸ್' ನ ಈ ಗಳಿಕೆಗೆ 25 ದಿನಗಳು ಬೇಕಾಯಿತು. ಅಂದಹಾಗೆ ಪುಲಿಮುರುಗನ್, ಲೂಸಿಫರ್ ಮತ್ತು ಪ್ರೇಮಲುನಂತಹ ಮಲಯಾಳಂ ಚಿತ್ರಗಳು ಅತ್ಯುತ್ತಮ ಕಲೆಕ್ಷನ್‌ಗಳೊಂದಿಗೆ ಮೊದಲ ಐದು ಸ್ಥಾನಗಳಲ್ಲಿವೆ.

             ಕೋಯಿಕ್ಕೋಡ್ :  'ಮಂಜುಮ್ಮೆಲ್ ಬಾಯ್ಸ್' ಫೆಬ್ರವರಿ 22 ರಂದು ಬಿಡುಗಡೆಯಾಯಿತು. ಚಿದಂಬರಂ ನಿರ್ದೇಶನದ ಈ ಚಿತ್ರಕ್ಕೆ ಮೊದಲ ದಿನವೇ ಭರ್ಜರಿ ಮೌತ್ ಪಬ್ಲಿಸಿಟಿ ಸಿಕ್ಕಿದೆ. ಕೇರಳವಲ್ಲದೆ ತಮಿಳುನಾಡಿನಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 'ಮಂಜುಮ್ಮೆಲ್ ಬಾಯ್ಸ್' ನ ತೆಲುಗು ಆವೃತ್ತಿಯ ಬಿಡುಗಡೆಯೊಂದಿಗೆ, ಕಲೆಕ್ಷನ್ ಬದಲಾಗಬಹುದು.

           ಯುನೈಟೆಡ್ ಸ್ಟೇಟ್ಸ್ ನಲ್ಲಿ ಒಂದು ಮಿಲಿಯನ್ ಡಾಲರ್ ಕಲೆಕ್ಷನ್ (ಅಂದಾಜು ರೂ 8 ಕೋಟಿ) ಗಳಿಸಿದ ಮೊದಲ ಮಲಯಾಳಂ ಚಿತ್ರ ಎಂಬ ದಾಖಲೆಯನ್ನೂ 'ಮಂಜುಮ್ಮೆಲ್ ಬಾಯ್ಸ್' ಪಡೆದುಕೊಂಡಿದೆ ಮಲಯಾಳಂ ಚಿತ್ರರಂಗಕ್ಕೆ ಇದೊಂದು ಹೆಮ್ಮೆಯ ಸಾಧನೆ.

            ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಯಾವುದೇ ಮಲಯಾಳಂ ಚಿತ್ರಕ್ಕೆ ಸಿಗದ ಮನ್ನಣೆ 'ಮಂಜುಮ್ಮೆಲ್ ಬಾಯ್ಸ್' ಗೆ ಸಿಗುತ್ತಿದೆ. ಚಿತ್ರದಲ್ಲಿ ಗುಣಕೇವ್ ಮತ್ತು ತಮಿಳು ಹಿನ್ನೆಲೆಯ ಪರಿಚಯವಿರುವುದರಿಂದ ಜನಸಾಮಾನ್ಯರು ಚಿತ್ರಮಂದಿರಗಳಿಗೆ ಮುಗಿಬಿದ್ದರು. ಅದೇನೇ ಇರಲಿ 'ಮಂಜುಮ್ಮೆಲ್ ಬಾಯ್ಸ್' ಸಿನಿಮಾ ನೋಡಲು ಬರುವ ಪ್ರೇಕ್ಷಕರು ಫುಲ್ ಚಪ್ಪಾಳೆ ತಟ್ಟಿಯೇ ಚಿತ್ರಮಂದಿರದಿಂದ ಆಚೆ ಹೋಗುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries