ಚೆನ್ನೈ: ಕೊಯಂಬತ್ತೂರಿನ ಇಶಾ ಯೋಗ ಕೇಂದ್ರದಿಂದ 2016ರಿಂದ ಆರು ಜನರು ನಾಪತ್ತೆಯಾಗಿದ್ದಾರೆ ಎಂದು ಮದ್ರಾಸ್ ಹೈಕೋರ್ಟಿಗೆ ತಮಿಳುನಾಡು ಪೊಲೀಸರು ಮಾಹಿತಿ ನೀಡಿದಾರೆ. ಈ ನಾಪತ್ತೆ ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಚೆನ್ನೈ: ಕೊಯಂಬತ್ತೂರಿನ ಇಶಾ ಯೋಗ ಕೇಂದ್ರದಿಂದ 2016ರಿಂದ ಆರು ಜನರು ನಾಪತ್ತೆಯಾಗಿದ್ದಾರೆ ಎಂದು ಮದ್ರಾಸ್ ಹೈಕೋರ್ಟಿಗೆ ತಮಿಳುನಾಡು ಪೊಲೀಸರು ಮಾಹಿತಿ ನೀಡಿದಾರೆ. ಈ ನಾಪತ್ತೆ ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ತಮ್ಮ ಸಹೋದರ ಗಣೇಶನ್ ಅವರನ್ನು ಹಾಜರುಪಡಿಸಬೇಕೆಂದು ಕೋರಿ ತಿರುನೆಲ್ವೇಲಿ ಜಿಲ್ಲೆಯ ತಿರುಮಲೈ ಎಂಬವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ ಎಸ್ ರಮೇಶ್ ಮತ್ತು ಸುಂದರ್ ಮೋಹನ್ ಅವರ ಪೀಠ ನಡೆಸುತ್ತಿರುವಾಗ ಪೊಲೀಸರು ನ್ಯಾಯಾಲಯಕ್ಕೆ ಮೇಲಿನ ಮಾಹಿತಿ ನೀಡಿದ್ದಾರೆ.
ಕೆಲ ಪ್ರಕರಣಗಳಲ್ಲಿ ನಾಪತ್ತೆಯಾದ ಜನರು ವಾಪಸ್ ಬಂದಿರಬಹುದಾದರೂ ಆ ಕುರಿತು ವಿವರಗಳು ಲಭ್ಯವಿಲ್ಲ ಎಂದೂ ಪೊಲೀಸರು ತಿಳಿಸಿದರು. ಈ ಕುರಿತು ಸ್ಥಿತಿಗತಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಎಪ್ರಿಲ್ 8ಕ್ಕೆ ನಿಗದಿಪಡಿಸಿದೆ.
ತಮ್ಮ ಸಹೋದರ ಗಣೇಶನ್ ಮಾರ್ಚ್ 2023ರಲ್ಲಿ ಕಾಣೆಯಾದ ನಂತರ ರೈತರಾಗಿರುವ ತಿರುಮಲೈ ನ್ಯಾಯಾಲಯದ ಕದ ತಟ್ಟಿದ್ದರು. ಗಣೇಶನ್ ಇಶಾ ಯೋಗ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು ಆದರೆ ಮಾರ್ಚ್ 22ರಂದು ಅಲ್ಲಿಗೆ ಹೋದಾಗ ಅವರು ಅಲ್ಲಿಗೆ ಬಾರದೆ ಎರಡು ದಿನಗಳಾಯಿತು ಎಂದು ಮಾಹಿತಿ ನೀಡಲಾಗಿತ್ತು.
ಯೋಗ ಕೇಂದ್ರದ ಉಸ್ತುವಾರಿ ದಿನೇಶ್ ಎಂಬವರು ದೂರು ನೀಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ, ಈ ಹಿನ್ನೆಲೆಯಲ್ಲಿ ತಿರುಮಲೈ ಕೋರ್ಟಿನ ಮೊರೆ ಹೋಗಿದ್ದರು.