ಜಿನೀವಾ: 2023ರಲ್ಲಿ ಜಗತ್ತಿನಾದ್ಯಂತ 8,565 ವಲಸಿಗರು ರಸ್ತೆ ಮತ್ತು ಸಮುದ್ರ ಮಾರ್ಗಗಳಲ್ಲಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಬುಧವಾರ ಹೇಳಿದೆ.
ಜಿನೀವಾ: 2023ರಲ್ಲಿ ಜಗತ್ತಿನಾದ್ಯಂತ 8,565 ವಲಸಿಗರು ರಸ್ತೆ ಮತ್ತು ಸಮುದ್ರ ಮಾರ್ಗಗಳಲ್ಲಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಬುಧವಾರ ಹೇಳಿದೆ.
2014ರಿಂದ ಈ ಸಂಸ್ಥೆಯು ವಲಸಿಗರ ಮರಣ ಪ್ರಮಾಣದ ದಾಖಲಾತಿಯಲ್ಲಿ ತೊಡಗಿದೆ.
2022ಕ್ಕೆ ಹೋಲಿಸಿದರೆ ಕಳೆದ ವರ್ಷ ಮೃತ ವಲಸಿಗರ ಸಂಖ್ಯೆ ಶೇ 20ರಷ್ಟು ಅಧಿಕವಾಗಿದೆ. ಅವುಗಳಲ್ಲಿ 3,700 ಮರಣಗಳು ನೀರಿನಲ್ಲಿ ಮುಳುಗಿ ಸಂಭವಿಸಿವೆ. ಮೆಡಿಟರೇನಿಯನ್ ಸಮುದ್ರದಲ್ಲಿ ದಾಟುವ ವೇಳೆ 3,126 ವಲಸಿಗರು ಮೃತಪಟ್ಟಿದ್ದಾರೆ ಎಂದು ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.
ಕಳೆದ ವರ್ಷ ಅತಿಹೆಚ್ಚು ಜನರು ಮೃತಪಟ್ಟಿರುವ ದೇಶ ದಕ್ಷಿಣ ಆಫ್ರಿಕ. ಸಹಾರಾ ಮರುಭೂಮಿ ಮತ್ತು ಕೆನರಿ ದ್ವೀಪಕ್ಕೆ ಹೊಂದಿಕೊಂಡಿರುವ ಕರಾವಳಿಯಲ್ಲಿ 1,866 ಮಂದಿ ಮೃತಪಟ್ಟಿದ್ದಾರೆ.