ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ಅನುವಾದಿತ ಕೃತಿಗಳಿಗೆ ನೀಡಲಾಗುವ 2023ನೇ ಸಾಲಿನ ಪ್ರಶಸ್ತಿಗಳನ್ನು ಇಂದು ಘೋಷಣೆ ಮಾಡಿದೆ. ಲೇಖಕ ಕೆ.ಕೆ.ಗಂಗಾಧರನ್ ಅವರ 'ಮಲಯಾಳಂ ಕತೆಗಳು' ಕನ್ನಡ ವಿಭಾಗದಿಂದ ಆಯ್ಕೆಯಾಗಿದೆ.

ಕೋಟ ಶಿವರಾಮ್ ಕಾರಂತ ಅವರು ಬರೆದ 'ಚೋಮನ ದುಡಿ' ಕೃತಿಯ ಕಶ್ಮೀರಿ ಭಾಷೆಯ ಅನುವಾದ 'ಚೋಮ ಸುನ್ ದೋಲ್' (ಅನುವಾದಕ: ಗುಲ್‌ಝರ್ ಅಹ್ಮದ್ ರಥರ್) ಕೃತಿಯೂ ಆಯ್ಕೆಯಾಗಿದೆ.
ಡಾ. ಎಂ.ಎಸ್ ಆಶಾದೇವಿ, ಕೇಶವ ಮಳಗಿ ಮತ್ತು ಪ್ರೊ ಎಸ್. ಸಿರಾಜ್ ಅಹ್ಮದ್ ಅವರು ಕನ್ನಡ ವಿಭಾಗದ ತೀರ್ಪುಗಾರರಾಗಿದ್ದರು.