ನವದೆಹಲಿ :ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಕೊನೆಗೂ 2024ರ ಐಪಿಎಲ್ ಟ್ವೆಂಟಿ-20 ಟೂರ್ನಿಯ ಇನ್ನುಳಿದ ಪಂದ್ಯದ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ಚೆನ್ನೈ ನಗರವು ಮೇ 26ರಂದು ಫೈಲ್ ಪಂದ್ಯದ ಆತಿಥ್ಯ ವಹಿಸಲಿದೆ. ಎಲ್ಲ 74 ಪಂದ್ಯಗಳು ಭಾರತದಲ್ಲೇ ನಡೆಯಲಿದೆ.

ಲೋಕಸಭೆ ಚುನಾವಣೆಯು ದೇಶದಲ್ಲಿ ಎಪ್ರಿಲ್ 19ರಿಂದ ಜೂನ್ 1ರ ತನಕ ಏಳು ಹಂತಗಳಲ್ಲಿ ನಡೆಯಲಿದೆ.
ಕ್ವಾಲಿಫೈಯರ್-1 ಹಾಗೂ ಎಲಿಮನೇಟರ್ ಪಂದ್ಯಗಳು ಅಹ್ಮದಾಬಾದ್ ನಲ್ಲಿ ಕ್ರಮವಾಗಿ ಮೇ 21 ಹಾಗೂ 22ರಂದು ನಡೆಯಲಿದೆ. ಆನಂತರ ಕ್ವಾಲಿಫೈಯರ್-2 ಹಾಗೂ ಬಹು ನಿರೀಕ್ಷಿತ ಫೈನಲ್ ಹಣಾಹಣಿಯು ಚೈನ್ನೈನ ಐಕಾನಿಕ್ ಚಿಪಾಕ್ ಕ್ರೀಡಾಂಗಣದಲ್ಲಿ ಅನುಕ್ರಮವಾಗಿ ಮೇ 24 ಹಾಗೂ 26ರಂದು ನಡೆಯಲಿದೆ.
ಐಪಿಎಲ್ ಆಡಳಿತ ಮಂಡಳಿಯು ಟೂರ್ನಿಯ ಉದ್ಘಾಟನಾ ಹಾಗೂ ಫೈನಲ್ ಪಂದ್ಯವನ್ನು ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಮೈದಾನದಲ್ಲಿ ಆಯೋಜಿಸುವ ಮೂಲಕ ಸಂಪ್ರದಾಯವನ್ನು ಪಾಲಿಸಿದೆ.
ಈ ಮೊದಲು ಬಿಸಿಸಿಐ 17ನೇ ಆವೃತ್ತಿಯ ಐಪಿಎಲ್ ನ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿತ್ತು. ಐಪಿಎಲ್ ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಿದೆ.