ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾ. 21ರಿಂದ 26ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ದೇಲಂಪಾಡಿ ಅನಿರುದ್ಧ ತಂತ್ರಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
21ರಂದು ಬೆಳಗ್ಗೆ 7.30ಕ್ಕೆ ಉಷ:ಪೂಜೆ, 10.30ಕ್ಕೆ ಗಣಪತಿ ಹೋಮ, ನಡೆಯಲ್ಲಿ ಶ್ರೀದೇವರ ಪ್ರಾರ್ಥನೆ, ಶ್ರೀದೇವರ ರಾಜಾಂಗಣ ಪ್ರವೇಶ, ಧ್ವಜಾರೋಹಣ, ನವಕಾಭಿಷೇಕ, ತುಲಾಭಾರ ಸೇವೆ, ರಾತ್ರಿ 8ಕ್ಕೆ ಶ್ರೀಭೂತ ಬಲಿ, ಕಟ್ಟೆಪೂಜೆ ನಡೆಯುವುದು. 22ರಂದು ಬೆಳಗ್ಗೆ 10ಕ್ಕೆ ಶ್ರೀದೆವರ ದರ್ಶನ ಬಲಿ, ರಾತ್ರಿ 8ಕ್ಕೆ ಶ್ರೀಭೂತಬಲಿ, ಕಟ್ಟೆಪೂಜೆ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಧಾಮ ಮಾಣಿಲ ಯಕ್ಷಗಾನ ಮಂಡಳಿಯಿಂದ 'ಸುದರ್ಶನ ವಿಜಯ' ಯಕ್ಷಗಾನ ಬಯಲಾಟ ನಡೆಯುವುದು. ಈ ಸಂದರ್ಭ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಪ್ರಸಕ್ತ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮಾರ್ಚ್ ತಿಂಗಳಲ್ಲಿ ನಿವೃತ್ತರಾಗಲಿರುವ ರಾಜೇಂದ್ರ ಬಿ. ಅವರನ್ನು ಗೌರವಿಸಲಾಗುವುದು. 23ರಂದು ಬೆಳಗ್ಗೆ ಶ್ರೀದೇವರ ಬಲಿ, ನವಕಾಭಿಷೇಕ, ಸಂಜೆ 6.30ಕ್ಕೆ ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಮತ್ತು ಶಿಷ್ಯ ವೃಂದದಿಂದ ನೃತ್ಯ ನೈವೇದ್ಯ, ರಾತ್ರಿ 8ಕ್ಕೆ ನಡುದೀಪೋತ್ಸವ, ಶ್ರೀದೇವರ ಪಡುಭಾಗ ಸವಾರಿ, ಕಟ್ಟೆಪೂಜೆ ನಡೆಯುವುದು. 24ರಂದು ಬೆಳಗ್ಗೆ 10ಕ್ಕೆ ಅಯ್ಯಂಗಾಯಿ ದರ್ಶನ ಬಲಿ, ನವಕಭಿಷೇಕ,ಮಧ್ಯಾಹ್ನ 12ಕ್ಕೆ ರಾಮಚಂದ್ರಭಟ್ ಮತ್ತು ಬಳಗದವರಿಂದ ಬಕ್ತಿಸಂಗೀತ ಕಾಯ್ಕ್ರಮ ಜರುಗಲಿರುವುದು. ಸಂಜೆ 7ರಿಂದ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ, ರಾತ್ರಿ 9ರಿಂದ ಶ್ರೀಭೂತಬಲಿ, ಕಟ್ಟೆಪೂಜೆ, ರಥೋತ್ಸವ, ಸುಡುಮದ್ದು ಪ್ರದರ್ಶನ, ದರ್ಶನ, ಶಯನ ನಡೆಯುವುದು.
25ರಂದು ಬೆಳಗ್ಗೆ ಕವಾಟೋದ್ಘಾಟನೆ, ಜಲದ್ರೋಣಿ ಪೂಜೆ, ಮಧ್ಯಾಹ್ನ 2ರಿಂದ ಬಿಂದು ಮತ್ತು ಅನುಪಮಾ ಬಳಗದಿಂದ ಭಕ್ತಿ ಭಜನ್ ಸಂಧ್ಯಾ ಕಾರ್ಯಕ್ರಮ, ಶ್ರೀದೇವರ ಬಲಿ, ಕಟ್ಟೆಪೂಜೆ, ಅವಭೃತ ಸ್ನಾನ, ದರ್ಶನಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ ನಡೆಯುವುದು. 26ರಂದು ಬೆಳಗ್ಗೆ 10ಕ್ಕೆ ಶ್ರೀ ಹುಲಿ ಭೂತದ ನೇಂ ನಡೆಯುವುದು.