ನವದೆಹಲಿ: ಹಿರಿಯ ಅಧಿಕಾರಿಗಳ ಹುದ್ದೆಗಳ ಬದಲಾವಣೆಯ ಭಾಗವಾಗಿ ಕೇಂದ್ರವು ತನ್ನ ವ್ಯಾಪ್ತಿಯ ವಿವಿಧ ಇಲಾಖೆಗಳಿಗೆ 22 ಜಂಟಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಶುಕ್ರವಾರ ಆದೇಶಿಸಿದೆ.
ಇದರಲ್ಲಿ ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS), ಭಾರತೀಯ ಕಂದಾಯ ಸೇವೆ (IRS) ಮತ್ತು ಭಾರತ ಅಂಚೆ ಸೇವೆಗೆ ಸೇರಿದ ಅಧಿಕಾರಿಗಳು ಇದ್ದಾರೆ.
ಹಿರಿಯ ಅಧಿಕಾರಿ ದೀಪಂಕರ್ ಅರೋನ್ ಅವರನ್ನು ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಹರೀಶ್ ಕುಮಾರ್ ವಶಿಷ್ಠ ಅವರನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಜಂಟಿ ಡಿಜಿಯಾಗಿ, ಸಿದ್ಧಾರ್ಥ್ ಮಹಾಜನ್ ಅವರನ್ನು ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಆನಂದ್ ಮಧುಕರ್ ಅವರನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಹೆಚ್ಚುವರಿ ಡಿಜಿ ಆಗಿ, ಸ್ವಾತಿ ಮೀನಾ ನಾಯಕ್ ಅವರನ್ನು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಂಟಿ ಕಾರ್ಯದರ್ಶಿಯಾಗಿ, ರವಿ ಶಂಕರ ಮತ್ತು ಗುಲ್ಜಾರ್. ಎನ್ ಅವರನ್ನು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಜಂಟಿ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ.
ಮನೋಜ್ ಕುಮಾರ್ ಜೈನ್ ಅವರು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಅಡಿಯಲ್ಲಿ ಎಫ್‌ಸಿಐಎಚ್‌ಕ್ಯೂ ಕಾರ್ಯನಿರ್ವಾಹಕ ನಿರ್ದೇಶಕ (Engg/IT) ಆಗಿರುತ್ತಾರೆ. ಪುಷ್ಪೇಂದ್ರ ರಜಪೂತ್ ಮತ್ತು ಸೌರಭ್ ಜೈನ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಿರಿಯ ಅಧಿಕಾರಿಗಳಾದ ಮಿಹಿರ್ ಕುಮಾರ್, ಪಾರ್ಥಸಾರಥಿ ಗುರ್ರಾಲ ಮತ್ತು ಅಭಿಜಿತ್ ಸಿನ್ಹಾ ಅವರನ್ನು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ.
ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ವಿಪುಲ್ ಅಗರ್ವಾಲ್ ಅವರನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಪ್ರಧಾನ ಆಯುಕ್ತರನ್ನಾಗಿ ನೇಮಿಸಲಾಗಿದೆ. ಜಗನ್ನಾಥ್ ಶ್ರೀನಿವಾಸನ್ ಅವರು ನ್ಯಾಯ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿರುತ್ತಾರೆ. ಅಲೋಕ್ ಮಿಶ್ರಾ ಅವರನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಭಾಸ್ಕರ್ ಚೋರಾಡಿಯಾ ಅವರು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO), ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಕಮಿಷನರ್ (HQ) ಆಗಿರುತ್ತಾರೆ. ಸಂಜಯ್ ಪಾಂಡೆ ಅವರನ್ನು ಹಣಕಾಸು ಸಲಹೆಗಾರ ಮತ್ತು ಮುಖ್ಯ ಖಾತೆ ಅಧಿಕಾರಿಯಾಗಿ ನೇಮಿಸಲಾಗಿದೆ. ಕುನಾಲ್ ಸತ್ಯಾರ್ಥಿ ಅವರು ಭೂ ಸಂಪನ್ಮೂಲ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿರುತ್ತಾರೆ.
ಮಹಾಬೀರ್ ಪ್ರಸಾದ್ ಅವರು ವಿದ್ಯುತ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರರಾಗಿದ್ದಾರೆ. ಅಜೀತ್ ಕುಮಾರ್ ಶ್ರೀವಾಸ್ತವ ಅವರು ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸೊಸೈಟಿ (NESTS) ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಸರ್ವೇಶ್ ಕುಮಾರ್ ಆರ್ಯ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.