ನವದೆಹಲಿ: ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ದತ್ತಾಂಶವನ್ನು ಎಸ್ ಬಐ, ಸುಪ್ರೀಂ ಕೋರ್ಟ್ ಗೆ ನೀಡಿದೆ. ಬಾಂಡ್ ಗಳ ಮುಖ ಬೆಲೆ, ಅದನ್ನು ಖರೀದಿಸಿದವರ ಹೆಸರು, ಯಾವ ಪಕ್ಷಕ್ಕೆ ನೀಡಲಾಗಿದೆ, ಹಾಗೂ ದಿನಾಂಕಗಳನ್ನೊಳಗೊಂಡ ವಿವರಗಳು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿವೆ.
2019 ರ ಏಪ್ರಿಲ್ 14- ಫೆ.15, 2024 ರ ಅವಧಿಯವರೆಗೂ ನಗದಾಗಿ ಪರಿವರ್ತಿಸಿಕೊಳ್ಳಲಾದ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ ಗೆ ತಲುಪಿದ್ದು, ಈ ಅವಧಿಯಲ್ಲಿ ಒಟ್ಟು 22,217 ಚುನಾವಣಾ ಬಾಂಡ್ ಗಳನ್ನು ಖರೀದಿಸಲಾಗಿದೆ, 22,030 ಬಾಂಡ್ ಗಳನ್ನು ಈ ವರೆಗೂ ನಗದಾಗಿ ಪರಿವರ್ತನೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಚುನಾವಣಾ ಬಾಂಡ್ ಗಳು ಮಾಹಿತಿ ಹಕ್ಕನ್ನು ಉಲ್ಲಂಘನೆ ಮಾಡುತ್ತವೆ ಎಂದು ಸುಪ್ರೀಂಮ್ ಕೋರ್ಟ್ ಹೇಳಿದ್ದು, ಇಬಿಎಸ್ (Electoral Bond Scheme) ನ್ನು ನಿಷೇಧಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಪೀಠ ಚುನಾವಣಾ ಬಾಂಡ್ ಗಳನ್ನು ಅಸಾಂವಿಧಾನಿಕ ಎಂದು ಹೇಳಿದ್ದು, ಫೆ.15 ರಂದು ತೀರ್ಪು ಪ್ರಕಟಿಸಿತ್ತು. ಅಷ್ಟೇ ಅಲ್ಲದೇ ಖರೀದಿಸಲಾಗಿರುವ ಚುನಾವಣಾ ಬಾಂಡ್ ಗಳ ಬಗ್ಗೆ ವಿವರಗಳನ್ನು ಸಲ್ಲಿಸಲು ಎಸ್ ಬಿಐ ಗೆ ಗಡುವು ವಿಧಿಸಿ ಸೂಚಿಸಿತ್ತು.
ಮಾರ್ಚ್ 6 ರ ಗಡುವು ವಿಸ್ತರಿಸಬೇಕೆಂದು ಸಲ್ಲಿಸಿದ್ದ ಎಸ್ ಬಿಐ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.