ಕಣ್ಣೂರು: ಕಣ್ಣೂರು ವಿಮಾನ ನಿಲ್ದಾಣದಲ್ಲಿ ಭಾರೀ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಇಬ್ಬರು ಪ್ರಯಾಣಿಕರಿಂದ 2.2 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ದುಬೈನಿಂದ ಬಂದಿದ್ದ ಕಾಸರಗೋಡು ಮೂಲದ ಅಬ್ದುಲ್ ರಹಮಾನ್ ಹಾಗೂ ಕೋಯಿಕ್ಕೋಡ್ ಮೂಲದ ರಫೀಕ್ ಬಂಧಿತ ಆರೋಪಿಗಳು.
ಡಿಐಆರ್ ಐ ಕಣ್ಣೂರು ಘಟಕಕ್ಕೆ ಲಭಿಸಿದ ಸುಳಿವಿನ ಆಧಾರದ ಮೇಲೆ ತನಿಖೆ ನಡೆಸಿದಾಗ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಶೂ ಮತ್ತು ಮೈಮೇಲೆ ಅಕ್ರಮವಾಗಿ ಸಾಗಿಸಲು ಯತ್ನಿಸಿದ ಚಿನ್ನಾಭರಣ ಸಿಕ್ಕಿಬಿದ್ದಿದೆ.