HEALTH TIPS

'ಎಲೆಕ್ಷನ್ ಕಿಂಗ್' 239ನೇ ಬಾರಿ ಸೋಲಲು ನಾಮಪತ್ರ ಸಲ್ಲಿಸಿದ ಪದ್ಮರಾಜನ್ : ಈ ಬಾರಿ ತ್ರಿಶೂರ್ ನಲ್ಲೂ ಕಣಕ್ಕೆ

                     ತ್ರಿಶೂರ್: ಚುನಾವಣಾ ಸೋಲಿನ ನಂತರ ಅನೇಕರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುತ್ತಾರೆ.  ಅಂಥವರಿಗೆ ಇನ್ನೊಂದು ಚುನಾವಣೆ ಎದುರಿಸುವ ಎದೆಗಾರಿಕೆ ಇರುವುದಿಲ್ಲ. ಆದರೆ, ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರಿನವರಾದ ಡಾ. ಕೆ.ಪದ್ಮರಾಜನ್ 65ರ ಹರೆಯದಲ್ಲೂ ಅವರಿಗೆ ಸೋಲು ಹೊಸದಲ್ಲ. ಇದುವರೆಗೆ ಬರೋಬ್ಬರಿ 238 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಎಲ್ಲೆಲ್ಲೂ ಸೋಲೇ ಸೋಲು. ಆದರೆ, ಪದ್ಮರಾಜನ್ ಚುನಾವಣೆಯಲ್ಲಿ ತಮ್ಮ ಉಮೇದುವಾರಿಕೆಯಿಂದ ಹಿಂದೆ ಸರಿಯಲು ಸಿದ್ಧರಿಲ್ಲ. ಪದ್ಮರಾಜನ್ ಅವರು 2024 ರ ಲೋಕಸಭೆ ಚುನಾವಣೆಗಾಗಿ ಸ್ಪರ್ಧಿಸಲಿದ್ದಾರೆ. 

                 ಕೇರಳದಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿರುವ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ 'ಚುನಾವಣೆಯ ಕಿಂಗ್' ಎಂದೇ ಬಣ್ಣಿಸಿಕೊಳ್ಳುವ ಕೆ ಪದ್ಮರಾಜನ್ ಸ್ಪರ್ಧಿಸುತ್ತಿದ್ದಾರೆ. ಪದ್ಮರಾಜನ್ ಕಳೆದ ವರ್ಷ ನಡೆದ ಪುತ್ತುಪಳ್ಳಿ ಉಪಚುನಾವಣೆ ಮತ್ತು ಅದಕ್ಕೂ ಮುನ್ನ ನಡೆದ ತ್ರಿಕ್ಕಾಕ್ಕರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. 28ರಂದು ಪದ್ಮರಾಜನ್ ತ್ರಿಶೂರ್ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ  ಜಿಲ್ಲಾಧಿಕಾರಿ ಎದುರು ನಾಮಪತ್ರ ಸಲ್ಲಿಸಿದರು.

                ಪದ್ಮರಾಜನ್ ಅವರ ಬಳಿ 49,000 ಮತ್ತು ಇಂಡಿಯನ್ ಬ್ಯಾಂಕ್‍ನಲ್ಲಿ 1,000 ರೂ. 5000 ಮೌಲ್ಯದ 1987 ರ ನೋಂದಾಯಿತ ದ್ವಿಚಕ್ರ ವಾಹನ ಮತ್ತು 34 ಗ್ರಾಂ ಚಿನ್ನವಿದೆ ಎಂದು ವಿವರದಲ್ಲಿ ಉಲ್ಲೇಖೀಸಲಾಗಿದೆ. ಸೇಲಂನ ಮೆಟ್ಟೂರು ತಾಲೂಕಿನಲ್ಲಿ 11 ಲಕ್ಷ ಮೌಲ್ಯದ 2000 ಚದರ ಅಡಿ ವಾಣಿಜ್ಯ ಕಟ್ಟಡ ಮತ್ತು 3 ಲಕ್ಷ ಮೌಲ್ಯದ 1311 ಚದರ ಅಡಿ ಮನೆ ಹೊಂದಿದ್ದಾರೆ. ಪದ್ಮರಾಜನ್ ತಮಿಳುನಾಡಿನ ಧರ್ಮಪುರಿ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿದ್ದಾರೆ.

              ಹೈಪ್ರೊಫೈಲ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಪದ್ಮರಾಜನ್ ಅವರ ಹವ್ಯಾಸ. ಪದ್ಮರಾಜನ್ ಅವರು ಅತಿ ಹೆಚ್ಚು ಚುನಾವಣೆಯಲ್ಲಿ ಸ್ಪರ್ಧಿಸಿದ ವ್ಯಕ್ತಿ ಮತ್ತು ಅತಿ ಹೆಚ್ಚು ಚುನಾವಣೆಯಲ್ಲಿ ಸೋತ ವ್ಯಕ್ತಿ ಎಂಬ ಗಿನ್ನಿಸ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ಹೊಂದಿದ್ದಾರೆ.

            ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಎ.ಬಿ.ವಾಜಪೇಯಿ, ನರಸಿಂಹರಾವ್, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತು ಕರುಣಾನಿಧಿ, ಕೇರಳದ ಮಾಜಿ ಮುಖ್ಯಮಂತ್ರಿ ಎ.ಕೆ.ಆಂಟನಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರದ ಮಾಜಿ ಸಚಿವ ವಯಲಾರ್ ರವಿ ಪದ್ಮರಾಜನ್ ಅವರೆದುರು ಸ್ಪರ್ಧಿಸಿ ಸೋಲುಂಡಿದ್ದಾರೆ. ಪದ್ಮರಾಜನ್ ಮೊದಲು ಸ್ಪರ್ಧಿಸಿದ್ದು 1988 ರಲ್ಲಿ. ಹೋಮಿಯೋಪತಿ ಪದವೀಧರರಾಗಿರುವ ಪದ್ಮರಾಜನ್ ಅವರು ಜೀವನೋಪಾಯಕ್ಕಾಗಿ  ಪಂಚಲೋಹಗಳ ಅಂಗಡಿ ನಡೆಸುತ್ತಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries