ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಗಿಳಿವಿಂಡು ಕನ್ನಡ ಸಾಹಿತ್ಯಿಕ, ಸಾಂಸ್ಕøತಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ 141ನೇ ಜನ್ಮದಿನಾಚರಣೆ ಮಾ.23ರಂದು ಮಧ್ಯಾಹ್ನ 2 ಗಂಟೆಗೆ ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಜರುಗಲಿದೆ. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮಹಮ್ಮದಾಲಿ .ಕೆ ಸಮಾರಂಭ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು.
ಗೋವಿಂದ ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶಿವಶಂಕರ.ಪಿ, ಡಾ.ಸಚೀಂದ್ರನ್, ಡಾ. ಸಿಂಧು ಜೋಸೆಫ್, ಡಾ.ರಮಾ, ಆಗ್ನೇಯ ಸಾಯಿ, ದಿನೇಶ ಕೆ.ಎನ್ ಭಾಗವಹಿಸುವರು. ಈ ಸಂದರ್ಭ ಗೋವಿಂದ ಪೈ ಅವರ ಬದುಕು -ಬರಹಗಳ ಕುರಿತು ವಿಚಾರಗೋಷ್ಠಿ ನಡೆಯುವುದು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸಮನ್ವಯಕಾರರಾಗಿರುವರು. ವಿದ್ಯಾಶ್ರೀ,ವಸುಮಿತ್ರಾ.ಕೆ.ಆರ್,ವದೀಕ್ಷಿತ.ಕೆ,ವಸರ್ವಾಣಿ ಬಿ.ಕೆ,ವಆದಿಶ್ರೀ ಎಸ್.ಎನ್, ವಿವೇಕ್.ಎ ಇವರು ಗೋವಿಂದ ಪೈ ಅವರ ಬದುಕು,ಕವನಗಳು, ನಾಟಕ, ತಾಯಿ ಮತ್ತು ನೋ ನಾಟಕಗಳು,ಸಂಶೋಧನೆಗಳು ಮತ್ತುಖಂಡಕಾವ್ಯಗಳ ಕುರಿತು ಪ್ರಬಂಧ ಮಂಡಿಸುವರು.
ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು, ಉಪನ್ಯಾಸಕರಾದ ಡಾ.ಸುಜೇಶ್.ಎಸ್, ಜಯಂತಿ.ಕೆ ಉಪಸ್ಥಿತರಿರುವರು.