HEALTH TIPS

23 ನಾಯಿ ತಳಿಗಳ ನಿಷೇಧ

            ವದೆಹಲಿ: 'ಅತ್ಯಂತ ಕ್ರೂರ' ಹಾಗೂ 'ಮನುಷ್ಯನ ಜೀವಕ್ಕೆ ಅಪಾಯ' ಎಂದು ಪರಿಗಣಿಸಲಾದ 23 ನಾಯಿ ತಳಿಗಳನ್ನು ವಿದೇಶಗಳಿಂದ ತರಿಸಿಕೊಳ್ಳುವುದು, ಅವುಗಳ ಮಾರಾಟ ಹಾಗೂ ಸಂತಾನಾಭಿವೃದ್ದಿ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

           ಈ ಕುರಿತು, ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ.ಒ.ಪಿ.ಚೌಧರಿ ಅವರು ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.

              ಪ್ರಾಣಿದಯಾ ಸಂಘ 'ಪೇಟಾ'ದ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

                ಪಿಟ್‌ಬುಲ್‌ ಟೆರಿಯರ್, ಟೋಸಾ ಇನು, ಅಮೆರಿಕನ್ ಸ್ಟಾಫೋರ್ಡ್‌ಶೈರ್ ಟೆರಿಯರ್, ಡೋಗೊ ಅರ್ಜೆಂಟಿನೊ, ರಷ್ಯನ್‌ ಶೆಫರ್ಡ್, ರೋಡೆಷಿಯನ್ ರಿಜ್‌ಬ್ಯಾಕ್, ವೋಲ್ಫ್‌ ಡಾಗ್ಸ್, ಮಾಸ್ಕೊ ಗಾರ್ಡ್‌ ಡಾಗ್ ನಿಷೇಧಿಸಲಾಗಿರುವ ಪ್ರಮುಖ ನಾಯಿ ತಳಿಗಳು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries