ಬದಿಯಡ್ಕ: ಉಪ್ಲೇರಿ ವಾಂತಿಚ್ಚಾಲು ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಮಾರ್ಚ್ 23 ಶನಿವಾರ ಬೆಳಗ್ಗೆ 10 ರಿಂದ ಶ್ರೀ ದೈವಕ್ಕೆ ವಿಶೇಷ ತಂಬಿಲ ಸೇವೆ ಮತ್ತು ನೂತನ ಟ್ರಸ್ಟ್ ಪದಗ್ರಹಣ ಸಮಾರಂಭ ಜರಗಲಿರುವುದು.
ಬೆಳಗ್ಗೆ 8 ಕ್ಕೆ ದೀಪಪ್ರತಿಷ್ಠೆ, ದೈವದ ಭಂಡಾರ ಇಳಿಯುವುದು, 9ಕ್ಕೆ ದೈವಕ್ಕೆ ಕ್ಷೀರಾಭಿಷೇಕ ಹಾಗೂ ಸೀಯಾಳಾಭಿಷೇಕ, ಬೆಳಗ್ಗೆ 10 ಕ್ಕೆ ವಿಶೇಷ ಅಲಂಕಾರದೊಂದಿಗೆ ತಂಬಿಲಸೇವೆ, ಸಾಮೂಹಿಕ ಪ್ರಾರ್ಥನೆ, ಕೊಡುಗೈದಾನಿ ಕುಳೂರು ಸದಾಶಿವ ಶೆಟ್ಟಿಯವರು ದಾನರೂಪದಲ್ಲಿ ನೀಡಿದ ಶ್ರೀದೈವದ ಮೂಲಬನ ಸ್ಥಳಕ್ಕೆ ಭೇಟಿ, ಬೆಳಗ್ಗೆ 11 ಕ್ಕೆ ಸಭಾಕಾರ್ಯಕ್ರಮದಲ್ಲಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರಿಂದ ದೀಪಪ್ರಜ್ವಲನೆ, ಧಾರ್ಮಿಕ ಮುಂದಾಳು ಶ್ರೀ ಗೋಪಾಲಕೃಷ್ಣ ಪೈ ಬದಿಯಡ್ಕ, ಡಾ.ಶ್ರೀನಿಧಿ ಸರಳಾಯ, ಬೆಂಗಳೂರು ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ ಶಾಸಕ ಎ.ಸಿ.ಶ್ರೀನಿವಾಸ್, ಜಗನ್ನಾಥ ರೈ ಕೊರೆಕ್ಕಾನ ಉಪಸ್ಥತರಿರುವರು. ಉಪ್ಲೇರಿ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಪ್ರಾಸ್ತಾವಿಕ ನುಡಿಗಳನ್ನಾಡುವರು.