ಮಲಪ್ಪುರಂ: ಜಿಲ್ಲೆಯಲ್ಲಿ ವೈರಲ್ ಹೆಪಟೈಟಿಸ್ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಪೋತುಕಲ್ ಪ್ರದೇಶ ಒಂದರಲ್ಲೇ 24 ಮಂದಿಗೆ ಸೋಂಕು ದೃಢಪಟ್ಟಿದೆ.
ಮಲಪ್ಪುರಂನಲ್ಲಿ ಒಂದು ತಿಂಗಳಲ್ಲಿ ವೈರಲ್ ಹೆಪಟೈಟಿಸ್‍ನಿಂದ ಸಾವನ್ನಪ್ಪಿದವರ ಸಂಖ್ಯೆ 3 ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ನಿನ್ನೆ ಕೂಡ ಜಿಲ್ಲೆಯಲ್ಲಿ ಯುವಕನೊಬ್ಬ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾನೆ.
ರೋಗ ಹರಡದಂತೆ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೇ ಹೊರತು ಸ್ವಯಂ ಚಿಕಿತ್ಸೆ ಪಡೆಯಬೇಡಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ನಿರ್ಜಲೀಕರಣದ ಅಪಾಯವಿರುವುದರಿಂದ ಸಾಕಷ್ಟು ಶುದ್ದ ನೀರು ಸೇವಿಸಲು ಮತ್ತು ಕುದಿಸಿದ ನೀರನ್ನು ಮಾತ್ರ ಕುಡಿಯಲು ಸಲಹೆ ನೀಡಲಾಗಿದೆ. ವೈರಲ್ ಹೆಪಟೈಟಿಸ್‍ನ ಮುಖ್ಯ ಲಕ್ಷಣಗಳೆಂದರೆ ಜ್ವರ, ಅತಿಸಾರ, ವಾಂತಿ ಮತ್ತು ಹಳದಿ ಮೂತ್ರ.