ಟೋಕಿಯೊ: ಜಪಾನ್ ರಾಜಧಾನಿ ಟೋಕಿಯೊದ ನೈರುತ್ಯ ಭಾಗದ ದ್ವೀಪ ಪ್ರದೇಶದ ಸಮುದ್ರದಲ್ಲಿ ಬೃಹತ್ ಅಲೆಗಳು ಎದ್ದಿದ್ದರಿಂದ ನೀರಿನಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿ ಸಿಲುಕಿದ್ದ 24 ಮೀನುಗಾರರನ್ನು ಜಪಾನ್‌ನ ಕರಾವಳಿ ಕಾವಲು ಪಡೆಯು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿದೆ.

ಜಪಾನ್‌ನ ಯೈಝು ಬಂದರು ಪ್ರದೇಶದಿಂದ ಫುಕುಯಿ ಮಾರು-8 ಹೆಸರಿನ ಹಡಗು ಮೀನುಗಾರರನ್ನು ಹೊತ್ತು ದಕ್ಷಿಣ ಅಮೆರಿಕಕ್ಕೆ ತೆರಳುತ್ತಿತ್ತು. ಈ ವೇಳೆ ಹಡಗಿನ ಎಂಜಿನ್‌ನಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಪೆಸಿಫಿಕ್ ಸಾಗರದಲ್ಲಿ ಬೀಸಿದ ಬೃಹತ್ ಗಾಳಿಯಿಂದಾಗಿ ಹಡಗು ದಾರಿ ತಪ್ಪಿತ್ತು. ಈ ಕುರಿತು ಕರಾವಳಿ ಕಾವಲು ಪಡೆಗೆ ಹಡಗಿನ ಕ್ಯಾಪ್ಟನ್ ಮಾಹಿತಿ ನೀಡಿದ್ದರು. ಹೀಗಾಗಿ ಮೀನುಗಾರರ ರಕ್ಷಣೆಗಾಗಿ ಮೂರು ಗಸ್ತು ಹಡಗುಗಳು, ವಿಶೇಷ ರಕ್ಷಣಾ ತಂಡಗಳನ್ನು ಒಳಗೊಂಡ ಮೂರು ಹೆಲಿಕಾಪ್ಟರ್‌ಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿತ್ತು. ಆದರೆ, ಈ ತಂಡ ಬರುವ ಮುನ್ನವೇ ಹಡಗಿನ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.
ಈ ಹಡಗಿನಲ್ಲಿ ಇಂಡೊನೇಷ್ಯಾದ 20 ಸಿಬ್ಬಂದಿ, ಕರಾವಳಿ ಕಾವಲು ಪಡೆಯ ಸಿಬ್ಬಂದಿ, ಹಾಗೂ ಕ್ಯಾಪ್ಟನ್ ಸೇರಿದಂತೆ ಜಪಾನ್‌ನ ಐವರು ಪ್ರಜೆಗಳು ಇದ್ದರು.