ಪೆರ್ಲ: ಗೋಳಿತ್ತಾರು ವಿನಾಯಕ ನಗರ ಶ್ರೀ ಸಿದ್ದಿವಿನಾಯಕ ಭಜನಾಸಮಿತಿ ವಾರ್ಷಿಕ ಮಹೋತ್ಸವ, ಶ್ರೀದೇವರ ಬೆಳ್ಳಿಯ ಛಾಯಾಚಿತ್ರ ಪ್ರತಿಷ್ಠಾ ಮಹೋತ್ಸವ ಮಾ. 24ಹಾಗೂ 25ರಂದು ಜರುಗಲಿದೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಅವರ ಮಾರ್ಗದರ್ಶನ ಹಾಗೂ ತಂತ್ರಿವರ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
24ರಂದು ಮಧ್ಯಾಹ್ನ 3ಕ್ಕೆ ಬಜಕೂಡ್ಲು ಶ್ರೀ ದುರ್ಗಾಪರಮೇಶ್ವರೀ ಭಜನಾಮಂದಿರ ವಠಾರದಿಂದ ಶ್ರೀದೇವರ ಛಾಯಾಚಿತ್ರ ಶೋಭಾಯಾತ್ರೆ ಹಾಗೂ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಗುಂಡಿತ್ತಾರು ಶ್ರೀ ಸಿದ್ಧಿವಿನಾಯಕ ಭಜನಾಮಂದಿರಕ್ಕೆ ಸಾಗಿಬರಲಿದೆ. ಸಂಜೆ 5ಕ್ಕೆ ತಂತ್ರಿವರ್ಯರ ಆಗಮನ, 6ಕ್ಕೆ ಸಾಮೂಹಿಕ ಪ್ರಾರ್ಥನೆ, ವಿವಿಧ ವೈದಿಕ ಕಾರ್ಯಕ್ರಮ ನಡೆಯುವುದು.
25ರಂದು ಬೆಳಗ್ಗೆ 6ಕ್ಕೆ 108ಕಾಯಿ ಗಣಪತಿ ಹೋಮ, 8ಕ್ಕೆ ಭಜನೆ, 10.40ರಿಂದ 11.20ರ ಮಧ್ಯೆ ಶ್ರೀ ಸಿದ್ಧಿವಿನಾಯಕ ದೇವರ ಬೆಳ್ಳಿಯ ಛಾಯಾಚಿತ್ರ ಪ್ರತಿಷ್ಠೆ, ಸಾನ್ನಿಧ್ಯ ಕಲಶ, ಸಅರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯುವುದು. 11.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಧಾಮ್ ಶ್ರೀ ಮೋಹನದಾಸ ಸ್ವಾಮೀಜಿ ಹಾಗೂ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಆಶೀರ್ವಚನ ನೀಡುವರು. ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್ ಅಧ್ಯಕ್ಷತೆ ವಹಿಸುವರು. ಕಶೆಕೋಡಿ ಸೂರ್ಯನಾರಾಯಣ ಭಟ್ ಧಾರ್ಮಿಕ ಉಪನ್ಯಾಸ ನೀಡುವರು.ವೇದಮೂರ್ತಿ ಚಂದ್ರಶೇಖರ ಭಟ್ ಮೊಗೇರು, ಯುವ ಉದ್ಯಮಿ ಅಜಯ್ ಪೈ ಅಮೆಕ್ಕಳ, ಮಂದಿರ ಸಮಿತಿ ಗೌರವಾಧ್ಯಕ್ಷ ಶ್ರೀರಾಮ ಭಟ್ ಗುಂಡಿತ್ತಾರು, ಬಾಳೆಕಲ್ಲು ಶ್ರೀಬ್ರಹ್ಮಬೈದರ್ಕಳ ಗರಡಿ ಮನೆಯ ಲಕ್ಷ್ಮೀನಾರಾಯಣ ಬಾಳೆಕಲ್ಲು ಗೌರವ ಉಪಸ್ಥಿತರಿರುವರು.
ಮಧ್ಯಾಹ್ನ 3ರಿಂದ ಭಜನೆ, ಸಂಜೆ 7.30ರಿಂದ ಸಾರ್ವಜನಿಕ ಶ್ರೀದುರ್ಗಾಪೂಜೆ, ರಾತ್ರಿ 9ರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು.