ತಿರುವನಂತಪುರಂ: ರಾಜ್ಯ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ಸಂದರ್ಭದಲ್ಲೂ ನವ ಕೇರಳ ಸಮಾವೇಶದಲ್ಲಿ ಮುಖ್ಯಮಂತ್ರಿಗಳ ಪೋಸ್ಟರ್ ಅಂಟಿಸಲು ಗುತ್ತಿಗೆ ಕಂಪನಿಗೆ ಹಣಕಾಸು ಇಲಾಖೆ ಹಣ ಮಂಜೂರು ಮಾಡಿದೆ.
ನವ ಕೇರಳ ಸದಸ್ ನ ಪ್ರಚಾರಕ್ಕಾಗಿ 25.40 ಲಕ್ಷ ವೆಚ್ಚದ ಪೋಸ್ಟರ್ ಮುದ್ರಿಸಲಾಗಿತ್ತು. ಇದಕ್ಕಾಗಿ ಸಿ ಆಪ್ಟಿಗೆ 9.16 ಕೋಟಿ ರೂ.ವೆಚ್ಚವಾಗಿದೆ. ಆದರೆ ಯಾವುದೇ ಕೊಟೇಶನ್ ನೀಡದೆ ಸಿ ಆಪ್ಟ್ ಗೆ ಪಿಆರ್ ಡಿ ಗುತ್ತಿಗೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಕಲ್ಯಾಣ ಪಿಂಚಣಿ, ಸರ್ಕಾರಿ ನೌಕರರ ಪಿಂಚಣಿ, ವೇತನ ಹೀಗೆ ನಾನಾ ವಸ್ತುಗಳಲ್ಲಿ ಸರ್ಕಾರ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಈ ನಡುವೆ ಸಚಿವರ ಭವನಗಳ ನಿರ್ವಹಣೆಗೆ ಹಾಗೂ ನವಕೇರಳ ಸಮಾವೇಶದ ಪೋಸ್ಟರ್ ಗಳ ಪ್ರಕಟಣೆಗೆ ಹಣಕಾಸು ಇಲಾಖೆ ಕೋಟ್ಯಂತರ ರೂ.ಮಂಜೂರು ಮಾಡಿದೆ. ಮುಖ್ಯಮಂತ್ರಿಗಳ ಮುಖಾಮುಖಿ ಕಾರ್ಯಕ್ರಮಕ್ಕೆ 33 ಲಕ್ಷ ರೂ.ಕೂಡಾ ಮಂಜೂರಾಗಿದೆ.