ಕಾಸರಗೋಡು: ನಗರದ ಅಡ್ಕತ್ತಬೈಲಿನ ಮನೆಯೊಂದರಲ್ಲಿ ಸೂಕ್ತ ದಾಖಲೆಪತ್ರಗಳಿಲ್ಲದೆ ಸಂಗ್ರಹಿಸಿಡಲಾಗಿದ್ದ 25ಲಕ್ಷ ರಊ. ನಗದನ್ನು ನಗರಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಅಡ್ಕತ್ತಬೈಲ್ ನಿವಾಸಿ ಮಹಮೂದ್ ಹಾಗೂ ಬದಿಯಡ್ಕ ಮೂಕಂಪಾರೆ ನಿವಾಸಿ ನವಾಜ್ ಬಿ.ಎಂ ಎಂಬವರನ್ನು ವಶಕ್ಕೆ ತೆಗೆದುಕೊಂಡು ಇವರಿಂದ ಹೇಳಿಕೆ ಸಂಗ್ರಹಿಸಿ ಬಿಡುಗಡೆಗೊಳಿಸಲಾಗಿದೆ. ವಶಪಡಿಸಿಕೊಂಡ ನಗದನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ.
ಲೋಕಸಭಾ ಚುನಾವಣೆ ದಿನ ಸಮೀಪಿಸುತ್ತಿದ್ದಂತೆ ಕಾಸರಗೋಡು ಜಿಲ್ಲೆ ಹಾಗೂ ಇತರೆಡೆ ಹವಾಲಾ ಹಣ ಚಲಾವಣೆ ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳೊಳಗೆ ಜಿಲ್ಲೆಯಲ್ಲಿ ಪೊಲೀಸರು ದಾಖಲೆಗಳಿಲ್ಲದ 50ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.