ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಇದರ ನೇತೃತ್ವದಲ್ಲಿ ನಡೆಯಲಿರುವ ಋಕ್‍ಸಂಹಿತಾ ಯಾಗ ಮತ್ತು ಸಹಸ್ರ ಚಂಡಿಕಾ ಯಾಗದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರಿಗೆ ನೀಡಿ ಅವರನ್ನು ಆಮಂತ್ರಿಸಲಾಯಿತು. ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅವರು ಶುಭನುಡಿಗಳನ್ನಾಡಿದರು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೋಳಿಕ್ಕಜೆ ಅನಂತ ಗೋವಿಂದ ಶರ್ಮ ಮಂಗಳೂರು, ಮೊಕ್ತೇಸರರಾದ ಚಾಂಗುಳಿ ಕೃಷ್ಣಭಟ್, ಬೇಂದ್ರೋಡು ವಿಶ್ವನಾಥ ಭಟ್, ವಾಟೆತ್ತಿಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್.ವಿ.ಭಟ್ ಉಪಸ್ಥಿತರಿದ್ದರು.
ಮಾರ್ಚ್ 26ರಿಂದ ಏಪ್ರಿಲ್ 3ರ ತನಕ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಅಷ್ಟೋತ್ತರ ಶತಕಲಶಾಭಿಷೇಕ, ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿ ಯಾಗ, ಋಕ್ ಸಂಹಿತಾ ಯಾಗ, ಐಕಮತ್ಯ ಹೋಮ, ರುದ್ರಹೋಮ, ಧನ್ವಂತರಿ ಹೋಮ ಮತ್ತು ಸಹಸ್ರಚಂಡಿಕಾ ಯಾಗ ನಡೆಯಲಿದೆ. ಸಹಸ್ರಾರು ಮಂದಿ ಪಾಲ್ಗೊಳ್ಳಲಿರುವ ಕಾರ್ಯಕ್ರಮದಲ್ಲಿ ಪ್ರತೀದಿನ ಸಾಂಸ್ಕøತಿಕ ಕಾರ್ಯಕ್ರಮಗಳಾದ ಭಜನೆ, ಭಕ್ತಿಗಾನಮೇಳ, ಹರಿಕಥೆ, ಪಂಚವೀಣಾವಾದನ, ದ್ವಂದ್ವ ವಯಲಿನ್, ನೃತ್ಯ ವೈವಿಧ್ಯ, ಯಕ್ಷಗಾನ, ಭರತನಾಟ್ಯ, ಸಂಗೀತ ಕಛೇರಿ ನಡೆಯಲಿದೆ.