ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯವು ನಾಲ್ಕು ವರ್ಷಗಳ ಗೌರವ ಪದವಿಗೆ ಅರ್ಜಿ ಆಹ್ವಾನಿಸಿದೆ. ತಿರುವನಂತಪುರಂ ಕ್ಯಾಪಿಟಲ್ ಸೆಂಟರ್‍ನಲ್ಲಿರುವ ಬಿಎ ಇಂಟರ್‍ನ್ಯಾಶನಲ್ ರಿಲೇಶನ್ಸ್ ವಿಶ್ವವಿದ್ಯಾನಿಲಯವು ನಾಲ್ಕು ವರ್ಷಗಳ ಗೌರವ ಪದವಿ ಕೋರ್ಸ್ ಆಗಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‍ಟಿಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ. ಮಾರ್ಚ್ 26 ರಾತ್ರಿ 11.50ರ ವರೆಗೆ ಛಿueಣ.sಚಿmಚಿಡಿಣh.ಚಿಛಿ.iಟಿ ಮತ್ತು www.nta.ac.in ಎಂಬ ಸೈಟ್‍ಗೆ ಭೇಟಿ ನೀಡುವ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಪ್ಲಸ್‍ಟು ನಲ್ಲಿ ಶೇಕಡಾ 50 ಅಂಕ ಅಥವಾ ತತ್ಸಮಾನ ವಿದ್ಯಾರ್ಹತೆಯಾಘಿದೆ. ಎಸ್‍ಸಿ ಮತ್ತು ಎಸ್‍ಟಿ ವಿದ್ಯಾರ್ಥಿಗಳಿಗೆ ಶೇಕಡಾ 5 ರಷ್ಟು ಅಂಕ ರಿಯಾಯಿತಿ ಇರುತ್ತದೆ. ಮಾರ್ಚ್ 28 ಮತ್ತು 29 ರಂದು ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು ಅವಕಾಶವಿದೆ. ಏಪ್ರಿಲ್ 30 ರಿಂದ ಪರೀಕ್ಷಾ ಕೇಂದ್ರಗಳ ಬಗ್ಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ಪರೀಕ್ಷೆಯು ಮೇ 15 ರಿಂದ 31 ರವರೆಗೆ ನಡೆಯಲಿದೆ. ಜೂನ್ 30 ರಂದು ಫಲಿತಾಂಶ ಪ್ರಕಟವಾಗಲಿದೆ. ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾಲಯದ ವೆಬ್‍ಸೈಟ್ www.cukerala.ac.in ಸಂದರ್ಶಿಸುವಂತೆ ಪ್ರಕಟಣೆ ತಿಳಿಸಿದೆ.