ಕುಂಬಳೆ: ಕುಂಬಳೆ ಸೀಮೆಯ ಪ್ರಧಾನ ದೈವಸ್ಥಾನಗಳಲ್ಲೊಂದಾದ,ಕಾರಣಿಕದ ತಾಣ, ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾ.30ರಿಂದ ಏಪ್ರಿಲ್ 4ರ ತನಕ ವಿವಿಧ ವೈಧಿಕ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮಾ. 30ರಂದು ಸಂಜೆ 4.ಕ್ಕೆ ಕೋಟೆಕುಂಜ ಮಾಲ್ಯದ ಮೂಲಸ್ಥಾನದಿಂದ ದೈವಗಳ ಭಂಡಾರವನ್ನು ಶ್ರೀ ದೈವಸ್ಥಾನ ಕ್ಕೆ ಬರಮಾಡಿಕ್ಕೊಳ್ಳಲಾಗುವುದು. ರಾತ್ರಿ 7.30 ಕ್ಕೆ ಶ್ರೀ ದೈವಸ್ಥಾನದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರವರು ಧ್ವಜಾರೋಹಣಗೈಯುವರು. ನಂತರ ತಂಬಿಲ ಮಹಾ ಪೂಜೆ ನಡೆಯಲಿದೆ. ಬಳಿಕ ಜೀವನ್ ಟಿವಿ ಫೇಮ್ ನಳಿನ್ ನಾರಾಯಣ್ ಕಾವುಗೋಳಿ , ರಿದಂ ಮ್ಯೂಸಿಕ್ ಬ್ಯಾಂಡ್ ಕಾಸರಗೋಡು ಇವರಿಂದ ಭಕ್ತಿಗಾನ ನೃತ್ಯ ರಸ ಸಂಜೆ ನಡೆಯಲಿದೆ.
ಮಾ.31ರಂದು ರಾತ್ರಿ 7.ಕ್ಕೆ ಶ್ರೀರಾಮ ಯಕ್ಷಗಾನ ಕಲಾಸಂಘ ಬೆದ್ರಡ್ಕ ಇವರಿಂದ ರಾಘವಂ ರಾವಣಾಂತಕಂ ಎಂಬ ಯಕ್ಷಗಾನ ಬಯಲಾಟ, ರಾತ್ರಿ 10.ಕ್ಕೆ ಶ್ರೀ ಕೋಟ್ಯತ್ತಾಯನ, ತಂಬಿಲ ನಡೆಯಲಿದೆ. ಏ.1ರಂದು ಮಧ್ಯಾಹ್ನ 1.ಕ್ಕೆ ಶ್ರೀ ಕಿನ್ನಿಮಾಣಿ ದೈವದ ನೇಮೋತ್ಸವ ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 7.ಕ್ಕೆ ಬಾಲಕೃಷ್ಣ ಬೆದ್ರಡ್ಕ ಮತ್ತು ಬಳಗದವರಿಂದ ಸ್ಯಾಕ್ಸೋಫೆÇನ್ ವಾದನ, 7.45ಕ್ಕೆ ಬೆದ್ರಡ್ಕ ಮಹಿಳಾ ಸಮಿತಿಯವರಿಂದ ತಿರುವಾದಿರ ಸಮೂಹ ನೃತ್ಯ, 8.ಕ್ಕೆ ಸನಾತನ ಬಾಲಗೋಕುಲ ಬೆದ್ರಡ್ಕ ಹಾಗೂ ಸ್ಥಳೀಯ ಬಾಲಪ್ರತಿಭೆಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ರಾತ್ರಿ 11.ಕ್ಕೆ ಪಾಪೆ ಬಂಡಿ ಉತ್ಸವ, ಬಂಡಿ ಕಾಣಿಕೆ, ತಂಬಿಲ, ಮಹಾಪೂಜೆ ನಡೆಯಲಿದೆ.
ಏ.2ರಂದು ಮಧ್ಯಾಹ್ನ 1.ಕ್ಕೆ ಶ್ರೀಪೂಮಾಣಿ ದೈವದ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 7ರಿಂದ ಪುಳ್ಕೂರು ಶ್ರೀ ಮಹಾದೇವ ಕುಣಿತ ಭಜನಾ ತಂಡದವರಿಂದ ಕುಣಿತ ಭಜನೆ ನೆರವೇರಲಿದ್ದು, 4.ಕ್ಕೆ ಕಣ್ಣೂರು ಶ್ರೀ ಬೀರ್ಣಾಳ್ವ ದೈವಸ್ಥಾನ ಹಾಗೂ ಪುತ್ತೂರು ಕೊಟ್ಯ ಶ್ರೀ ಧೂಮಾವತಿ ದೈವಸ್ಥಾನ ಇವುಗಳ ಭಂಡಾರವನ್ನು ವಾಧ್ಯಘೋಷಗಳೊಂದಿಗೆ ಶ್ರೀ ದೈವಸ್ಥಾನಕ್ಕೆ ಬರಮಾಡಿಕ್ಕೊಳ್ಳಲಾಗುವುದು. ರಾತ್ರಿ 9.ಕ್ಕೆ ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ನೃತ್ಯ ಸಂಗಮ-ನೃತ್ಯ ನೈವೇದ್ಯಂ, ರಾತ್ರಿ 11.30 ರಿಂದ ಪಾಪೆ ಬಂಡಿ ಉತ್ಸವ, ಪಾಪೆಬಂಡಿ ಕಾಣಿಕೆ, ವಿಶೇಷ ಸುಡುಮದ್ದು ಪ್ರದರ್ಶನ, ತಂಬಿಲ, ಮಹಾಪೂಜೆ ನಡೆಯಲಿದೆ. ಏ.3 ರಂದು ಮಧ್ಯಾಹ್ನ 1.00ಕ್ಕೆ ಶ್ರೀ ಬೀರ್ನಾಳ್ವ ದೈವದ ನೇಮೋತ್ಸವ, ಸಂಜೆ 3.30ಕ್ಕೆ ಶ್ರೀ ಧೂಮಾವತಿ ದೈವದ ನೇಮೋತ್ಸವ, ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 7.00ಕ್ಕೆ ಆರಾಟ್ ಮಹೋತ್ಸವದ ಅಂಗವಾಗಿ ಉಜಿರೆಕೆರೆಯ ಬಳಿ ಮಿಲೆನಿಯಂ ಸ್ಟಾರ್ಸ್ ಮಂಗಳೂರು ತಂಡದವರಿಂದ ಸ್ವಾಗತ್ ಮ್ಯೂಸಿಕಲ್ ನೈಟ್ಸ್ ಮತ್ತು ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, ರಾತ್ರಿ 9.00ಕ್ಕೆ ಶ್ರೀ ದೈವಗಳ ಮಂಗಳ ಸ್ನಾನ, ಬಳಿಕ ಶ್ರೀದೈವಸ್ಥಾನದ ತಂತ್ರಿವರ್ಯರಿಂದ ಧ್ವಜಾವರೋಹಣ, ತಂಬಿಲ, ನಡೆಯಲಿದೆ. ಏ. 4ರಂದು ಬೆಳಿಗ್ಗೆ 8.00 ಕ್ಕೆ ಶ್ರೀ ದೈವಸ್ಥಾನದಿಂದ ಮೂಲ ಸ್ಥಾನ ಕೋಟೆಕುಂಜ ಮಾಲ್ಯಕ್ಕೆ, ಹಾಗೂ ಕಣ್ಣೂರು ಮತ್ತು, ಪುತ್ತೂರು ಕೊಟ್ಯ ದೈವಸ್ಥಾನಗಳಿಗೆ ಭಂಡಾರ ಹೊರಡುವುದರೊಂದಿಗೆ ಬೆದ್ರಡ್ಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಮೊಕ್ತೇಸgರಾದÀ ಎ.ರಮೇಶ್ ರೈ ಕೋಟೆಕುಂಜ, ಅನಂತ ವಿಷ್ಣು ಉಡುವಣ್ಣಾಯ, ಪಿ.ರಾಮಪ್ರಸಾದ್ ಬಲ್ಲಾಳ್ ಚಿಪ್ಪಾರು, ಕೆ.ಆರ್ ಆಳ್ವ ಕೋಟೆಕುಂಜ ಕಂಬಾರು, ಶೀನ ಶೆಟ್ಟಿ ಪಂಜದಗುತ್ತು, ಬೆದ್ರಡ್ಕ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಎ.ಮಂಜುನಾಥ ರೈ ಕೋಟೆಕುಂಜ, ಸಂಚಾಲಕ ಕೆ. ಲಕ್ಷ್ಮಣ ನೋಂಡ ಕೋಟೆಕುಂಜ ಇವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.