ತಿರುವನಂತಪುರ: ದ್ವಿಚಕ್ರ ವಾಹನ ಅಭ್ಯಾಸ ಪ್ರದರ್ಶನ ತಡೆಯುವ ಅಂಗವಾಗಿ ಪೋಲೀಸರು ಹಾಗೂ ಮೋಟಾರು ವಾಹನ ಇಲಾಖೆ ನಡೆಸಿದ ಜಂಟಿ ತಪಾಸಣೆಯಲ್ಲಿ 26 ಮಂದಿಯ ಚಾಲನಾ ಪರವಾನಗಿ ರದ್ದುಪಡಿಸಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ. 4,70,750 ದಂಡವನ್ನೂ ವಸೂಲಿ ಮಾಡಲಾಗಿದೆ.
ಶನಿವಾರ ವಿವಿಧ ಜಿಲ್ಲೆಗಳಲ್ಲಿ ನಡೆಸಿದ ಆಪರೇಷನ್ ಬೈಕ್ ಸ್ಟಂಟ್ ಎಂಬ ತಪಾಸಣೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ತಪಾಸಣೆ ವೇಳೆ 32 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಲಯದ ವಿಚಾರಣೆಯೂ ಆರಂಭವಾಗಿದೆ.
ವಾಹನವನ್ನು ಮಾರ್ಪಾಡು ಮಾಡಿ ಹೈಸ್ಪೀಡ್ ಸ್ಟಂಟ್ ಮಾಡುತ್ತಿರುವ ವಿಡಿಯೋ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಟ್ರಾಫಿಕ್ ಐಜಿ ಅಧೀನದಲ್ಲಿರುವ ಟ್ರಾಫಿಕ್ ರೋಡ್ ಸೇಫ್ಟಿ ಸೆಲ್ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುವ ಮೂಲಕ ಆರೋಪಿಗಳನ್ನು ಪತ್ತೆ ಮಾಡಿದೆ.
ರಾಜ್ಯ ಪೋಲೀಸ್ ಮುಖ್ಯಸ್ಥ ಡಾ. ಶೇಖ್ ದರ್ವೇಶ್ ಸಾಹಿಬ್ ಅವರ ನಿರ್ದೇಶನದಂತೆ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್, ಸಾರಿಗೆ ಆಯುಕ್ತ ಹಾಗೂ ಎಡಿಜಿಪಿ ಎ.ಎಸ್.ಶ್ರೀಜಿತ್, ಪೆÇಲೀಸ್ ಹಾಗೂ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.