ಅಜಂಗಢ:: ಉತ್ತರ ಪ್ರದೇಶ ರಾಜ್ಯದಾದ್ಯಂತ ಭಾನುವಾರ ₹34,000 ಕೋಟಿಗೂ ಅಧಿಕ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದಾರೆ.
ಅಜಂಗಢ:: ಉತ್ತರ ಪ್ರದೇಶ ರಾಜ್ಯದಾದ್ಯಂತ ಭಾನುವಾರ ₹34,000 ಕೋಟಿಗೂ ಅಧಿಕ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರೆ ಬಿಜೆಪಿ ನಾಯಕರು ಮೋದಿ ಜೊತೆಗಿದ್ದರು.
ಅಜಂಗಢ, ಶ್ರವಸ್ಥಿ, ಚಿತ್ರಕೂಟ ಮತ್ತು ಅಲಿಗಢ ವಿಮಾನ ನಿಲ್ದಾಣ ಮತ್ತು ಲಖನೌದ ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಅನ್ನು ಅವರು ಲೋಕಾರ್ಪಣೆ ಮಾಡಿದರು.
ಅಜಂಗಢದಲ್ಲಿ ₹108 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಮಹಾರಾಜಾ ಸುಹೆವ್ ದೇವ್ ರಾಜ್ಯ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿದರು.
ಪ್ರಧಾನಿ ಗ್ರಾಮ ಸಡಕ್ ಯೋಜನೆಯಡಿ ₹3,700 ಕೋಟಿ ವೆಚ್ಚದಲ್ಲಿ ಉತ್ತರ ಪ್ರದೇಶದ 59 ಜಿಲ್ಲೆಗಳಲ್ಲಿ 5,342 ಕಿ.ಮೀಗೂ ಅಧಿಕ ರಸ್ತೆ ನಿರ್ಮಾಣ ಮಾಡಲಾಗಿದ್ದು, ಅವುಗಳನ್ನು ವರ್ಚುವಲ್ ಆಗಿ ಮೋದಿ ಉದ್ಘಾಟಿಸಿದರು.
₹8,200 ಕೋಟಿ ವೆಚ್ಚದ 12 ರೈಲ್ವೆ ಸ್ಟೇಷನ್ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನೂ ಮೋದಿ ನೆರವೇರಿಸಿದರು.
ನಮಾಮಿ ಗಂಗಾ ಯೋಜನೆಯಡಿ ನಿರ್ಮಾಣ ಮಾಡಲಾಗಿರುವ ಪ್ರಯಾಗ್ ರಾಜ್, ಎಟವಾ ಮತ್ತು ಜೌಪುರದ ಕೊಳಚೆ ನೀರು ನಿರ್ವಹಣಾ ಕೇಂದ್ರಗಳನ್ನೂ ಲೋಕಾರ್ಪಣೆ ಮಾಡಿದರು.