ನವದೆಹಲಿ: ಆದಾಯ ತೆರಿಗೆ (ಐ.ಟಿ) ಇಲಾಖೆಯು ₹3,567 ಕೋಟಿ ಪಾವತಿಸುವಂತೆ ತನಗೆ ಹೊಸದಾಗಿ ನೋಟಿಸ್ ನೀಡಿದೆ ಎಂದು ಕಾಂಗ್ರೆಸ್ ಇಂದು (ಭಾನುವಾರ) ತಿಳಿಸಿದೆ.
ನವದೆಹಲಿ: ಆದಾಯ ತೆರಿಗೆ (ಐ.ಟಿ) ಇಲಾಖೆಯು ₹3,567 ಕೋಟಿ ಪಾವತಿಸುವಂತೆ ತನಗೆ ಹೊಸದಾಗಿ ನೋಟಿಸ್ ನೀಡಿದೆ ಎಂದು ಕಾಂಗ್ರೆಸ್ ಇಂದು (ಭಾನುವಾರ) ತಿಳಿಸಿದೆ.
2014-15ನೇ ವರ್ಷ ₹663 ಕೋಟಿ, 2015-16ನೇ ವರ್ಷ ₹664 ಕೋಟಿ ಮತ್ತು 2016-17ನೇ ವರ್ಷ ₹417 ಕೋಟಿ ತೆರಿಗೆ ಬಾಕಿ, ಬಡ್ಡಿ ಹಾಗೂ ದಂಡಕ್ಕೆ ಸಂಬಂಧಿಸಿ ಹೊಸದಾಗಿ ನೋಟಿಸ್ ನೀಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ ಎಂದು 'ಪಿಟಿಐ' ವರದಿ ಮಾಡಿದೆ.
ಇತ್ತೀಚೆಗಷ್ಟೇ 2017-18ರಿಂದ 2020-21 ವರ್ಷಗಳ ತೆರಿಗೆ ಬಾಕಿ, ಬಡ್ಡಿ ಹಾಗೂ ದಂಡಕ್ಕೆ ಸಂಬಂಧಿಸಿದಂತೆ ₹1,823.08 ಕೋಟಿ ಪಾವತಿಸುವಂತೆ ಐ.ಟಿ ಇಲಾಖೆ ನೋಟಿಸ್ ನೀಡಿತ್ತು.
ರಾಜಕೀಯ ಪಕ್ಷಗಳಿಗಿರುವ ತೆರಿಗೆ ವಿನಾಯಿತಿಯನ್ನು ನೀಡದೆ ಸಂಪೂರ್ಣವಾಗಿ ದಂಡ ಸಮೇತ ತೆರಿಗೆ ಪಾವತಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೇಲಿನ ವರ್ಷಗಳ ತೆರಿಗೆ ಮರುಮೌಲ್ಯಮಾಪನ ಸಂಬಂಧ ಐಟಿ ಅಧಿಕಾರಿಗಳು ಆರಂಭಿಸಿದ್ದ ಪ್ರಕ್ರಿಯೆಯ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾ ಮಾಡಿತ್ತು.