ನವದೆಹಲಿ: 1.25 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 3 ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ, ವರ್ಚುವಲ್ ಆಗಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಗುಜರಾತ್‌ನಲ್ಲಿ 2 ಮತ್ತು ಅಸ್ಸಾಂನಲ್ಲಿ 1 ಘಟಕ ನಿರ್ಮಾಣವಾಗಲಿದೆ.
ನವದೆಹಲಿ: 1.25 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 3 ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ, ವರ್ಚುವಲ್ ಆಗಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಗುಜರಾತ್‌ನಲ್ಲಿ 2 ಮತ್ತು ಅಸ್ಸಾಂನಲ್ಲಿ 1 ಘಟಕ ನಿರ್ಮಾಣವಾಗಲಿದೆ.
ಇದೊಂದು ಐತಿಹಾಸಿಕ ದಿನವಾಗಿದ್ದು, ಉಜ್ವಲ ಭವಿಷ್ಠ ಬಲಿಷ್ಠ ಹೆಜ್ಜೆ ಇಡುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್‌ಗಳು ದೇಶವನ್ನು ಸ್ವಾವಲಂಬಿ ಮತ್ತು ಆಧುನಿಕತೆಯತ್ತ ಕೊಂಡೊಯ್ಯುತ್ತವೆ ಎಂದೂ ತಿಳಿಸಿದ್ದಾರೆ.
ಕೇಂದ್ರದಲ್ಲಿ ಹಿಂದೆ ಇದ್ದ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿ ಹಗರಣಗಳನ್ನು ಮಾಡಲು ಬದ್ಧವಾಗಿದ್ದವು. ಆದರೆ, ಸೆಮಿ ಕಂಡಕ್ಟರ್ ಉದ್ಯಮದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಲಿಲ್ಲ ಎಂದು ಅವರು ಕುಟುಕಿದ್ದಾರೆ.
ಗುಜರಾತ್‌ನ ಧೊಲೆರಾದಲ್ಲಿ ಫ್ಯಾಬ್ ಘಟಕ ಮತ್ತು 2 ಸೆಮಿ ಕಂಡಕ್ಟರ್ ಘಟಕಗಳ ಸ್ಥಾಪನೆ ಆಗಲಿದೆ. ಗುಜರಾತ್‌ನ ಸನಂದ್‌ನಲ್ಲಿ ಔಟ್‌ಸೋರ್ಸಿಂಗ್ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (ಒಎಸ್‌ಎಟಿ) ಘಟಕ ಮತ್ತು ಅಸ್ಸಾಂನ ಮೊರಿಗಾಂವ್‌ನಲ್ಲಿ ಒಎಸ್‌ಎಟಿ ಘಟಕ ಸ್ಥಾಪಿಸಲಾಗುತ್ತದೆ.