ಕಾಸರಗೊಡು: ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ರಾಜನ್ ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಏ. 4ರಿಂದ 8ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ವೇದಮೂರ್ತಿ ಶಂಕರನಾರಯಣ ಕಡಮಣ್ಣಾಯ ಕರ್ಕುಳಬೂಡು ಅವರ ಆಚಾರ್ಯತ್ವ ಹಾಗೂ ಬಂಬ್ರಾಣ ಯಜಮಾನ ಬಿ. ಮೋಹನದಾಸ ರೈ ಅವರ ನೇತೃತ್ವದಲ್ಲಿ ಕಾಯ್ಕ್ರಮ ಜರುಗುವುದು.ಏ. 4ರಂದು ಸಂಜೆ 6ಕ್ಕೆ ಭಜನೆ, 7ಕ್ಕೆ ಬಂಬ್ರಾಣ ಯಜಮಾನರ ದೊಡ್ಡ ಮನೆಯಿಂದ ದೈವಗಳ ಕೀರ್ವಾಳು ಭಂಡರ ಆಗಮನ, 7.30ಕ್ಕೆ ಕಿದೂರು ಶ್ರೀ ಮಹಾದೇವ ದೇವಸ್ತನದಿಂದ ಹಾಗೂ ಬೆಜಪ್ಪೆ ಭಂಡಾರ ಮನೆಯಿಂದ ಕೀರ್ವಾಳು ಭಂಡಾರ ಆಗಮನವಾಗುವುದು.
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 7.30ಕ್ಕೆ ನೃತ್ಯ ಕಾರ್ಯಕ್ರಮ ನಡೆಯುವುದು. ರಾತ್ರಿ 8ಕ್ಕೆ ಅಂಬಿಲಡ್ಕ ನವಸೇವಾ ವೃಂದ ವಾರ್ಷಿಕೋತ್ಸವ, ಸಭಾ ಕಾರ್ಯಕ್ರಮ ನಡೆಯುವುದು. ಬಂಬ್ರಾಣ ಯಜಮಾನ ಬಿ. ಮೋಹನದಸ ರೈ ಅಧ್ಯಕ್ಷತೆ ವಹಿಸುವರು. ವೇದಮೂರ್ತಿ ಬಜೆ ಹರಿನಾರಾಯಣ ಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಾತ್ರಿ 8.30ಕೆಕ ದ್ಯವಗಳಿಗೆ ತಂಬಿಲ ನಡೆಯುವುದು. 5ರಂದು ಸಂಜೆ 4.30ಕ್ಕೆ ಕಿನ್ನಿಮಾಣಿ ದೈವದ ನೇಮ, ದೈವಗಳಿಗೆ ತಂಬಿಲ, 7.30ರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು. 6ರಂದು ಸಂಜೆ 4.30ಕ್ಕೆ ಪೂಮಾಣಿ ದೈವದ ನೇಮ, ದ್ಯವಗಳಿಗೆ ತಂಬಿಲ, 7.30ರಿಂದ ಸಂಗೀತ ಗಾನ ಲಹರಿ, ಜಾನಪದ ನೃತ್ಯ, ಅಭಿನಂದನಾ ಸಮಾರಂಭ ನಡೆಯುವುದು.ರತ್ರಿ 9ರಿಂದ 'ಕೊಪ್ಪರಿಗೆ'ತುಳು ಹಾಸ್ಯಮಯ ನಾಟಕ ಪ್ರದಶ್ನಗೊಳ್ಳುವುದು. 7ರಂದು ಸಂಜೆ 4.30ಕ್ಕೆ ಬೀರ್ಣಾಳ್ವ ಹಾಗೂ ಪರಿವಾರ ದಯವಗಳ ನೇಮ, ರಾತ್ರಿ 8.30ಕ್ಕೆ ನೃತ್ಯ ಕಾರ್ಯಕ್ರಮ, 9ರಿಂದ ಡಾ. ವಿದ್ಯಾಲಕ್ಷ್ಮೀ ನಾಟ್ಯಾಲಯ ಕುಂಬಳೆ ವತಿಯಿಂದ ನೃತ್ಯ ಸಂಭ್ರಮ ನಡೆಯುವುದು. 8ರಂದು ಬೆಳಗ್ಗೆ 11ಕ್ಕೆ ಶ್ರೀದೈವಗಳಿಗೆ ತಂಬಿ, ಭಂಡಾರ ಇಳಿಸುವ ಕಾರ್ಯಕ್ರಮ ನಡೆಯುವುದು.