HEALTH TIPS

51 ವರ್ಷದ ಬಳಿಕ ಮರುಕಳಿಸುತ್ತಿದೆ ಈ ಅಪರೂಪದ ಸೂರ್ಯಗ್ರಹಣ..! ಯಾವಾಗ? ಏನಿದರ ವಿಶೇಷ.?

 2024ರಲ್ಲಿ ಸಾಲು ಸಾಲು ಗ್ರಹಣಗಳು ನಮಗೆ ಕಾಣಲು ಸಿಗುತ್ತವೆ. ಇನ್ನು ಗ್ರಹಗಳಿಗೆ ಪುರಾಣಗಳಿಂದು ಹಿಡಿದು ವಿಜ್ಞಾನದಲ್ಲಿ ಬಹಳ ಮಹತ್ವವಿದೆ. ಜೊತೆಗೆ ಅದರದ್ದೇ ಆದ ಲೆಕ್ಕಾಚಾರಗಳಿವೆ. ಗ್ರಹಣದ ಸಮಯ, ಗ್ರಹಣ ನಂತರದ ಪರಿಣಾಮಗಳು ಸೇರಿದಂತೆ ಹತ್ತು ಹಲವು ವಿಚಾರಗಳಿಂದ ಗ್ರಹಣವು ಪ್ರಾಮುಖ್ಯತೆ ಪಡೆದುಕೊಂಡಿದೆ.

ಈ ವರ್ಷದ ಮೊದಲ ಚಂದ್ರಗ್ರಹಣ ಇದೇ ಮಾರ್ಚ್ 25ರಂದು ಸಂಭವಿಸಲಿದೆ. ಅಂದರೆ ಅಂದು ಹೋಳಿ ಹುಣ್ಣಿಮೆಯೂ ಬಂದಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ ಎಂದು ಹೇಳಲಾಗಿದೆ. ಆದರೂ ಈ ಗ್ರಹಣ ನಮಗೆ ಮುಖ್ಯ ಎನಿಸಿದೆ. ಆದರೆ ಇದಾದ ಬಳಿಕ ಮತ್ತೊಂದು ಸೂರ್ಯ ಗ್ರಹನ ಸಂಭವಿಸಲಿದ್ದು, ಭಾರೀ ಕುತೂಹಲ ಮೂಡಿಸಿದೆ.

ಏಪ್ರಿಲ್ 8ರಂದು ಈ ಸೂರ್ಯಗ್ರಹಣ ಸಂಭವಿಸುತ್ತಿದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋಗುವಾಗ ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದು ಸೂರ್ಯ ಗ್ರಹಣವಾಗುತ್ತದೆ. ಇದು ಸಂಪೂರ್ಣ ಸೂರ್ಯ ಗ್ರಹಣವಾಗಿದೆ.

ಇದೊಂದು ಅಪರೂಪದ ಗ್ರಹಣ

ಹೌದು ಈ ಏಪ್ರಿಲ್ 8ರಂದು ಸಂಭವಿಸುತ್ತಿರುವ ಸೂರ್ಯಗ್ರಹಣವು ಅಪರೂಪದ ಗ್ರಹಣ ಎಂದು ಕರೆಯಲಾಗಿದೆ. ಏಕೆಂದರೆ ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಮುಚ್ಚಿಕೊಳ್ಳುತ್ತಾನೆ. ಇದರಿಂದ ಭೂಮಿಯ ಮೇಲೆ ಸಾಮಾನ್ಯಕ್ಕಿಂತ ಹೆಚ್ಚು ಕತ್ತಲೆ ಆವರಿಸಿಕೊಳ್ಳಲಿದೆ. ಜೊತೆಗೆ ಗ್ರಹಣದ ಹಿಂದಿನ ದಿನದಂದು ಚಂದ್ರನು ಭೂಮಿಯನ್ನು ಸಮೀಪಿಸುತ್ತಿರುವಾಗ ಅಪರೂಪದ ಕಾಸ್ಮಿಕ್ ಜೋಡಣೆಯು ಕೇಂದ್ರ ಹಂತವನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ಚಂದ್ರ ಎಂದಿಗಿಂತ ದೊಡ್ಡದಾಗಿ ಗೋಚರವಾಗುತ್ತದೆ. ಗ್ರಹಣದ ಹಿಂದಿನ ದಿನದಂದು ಚಂದ್ರನು ಭೂಮಿಗೆ ಕೇವಲ 3,60,000 ಕಿಲೋಮೀಟರ್ ದೂರದಲ್ಲಿ ಇರಲಿದ್ದು, ಇದು ಚಂದ್ರ ಅತ್ಯಂತ ಸಮೀಪಕ್ಕೆ ಬರುವ ದಿನವಾಗಿದೆ.

ಅತೀ ಹೆಚ್ಚು ಸಮಯ ಸೂರ್ಯನ ಮುಚ್ಚಲಿದೆ ಚಂದ್ರ

ಹೌದು ಈ ಸೂರ್ಯಗ್ರಹಣದಲ್ಲಿ ಚಂದ್ರ ಅತೀ ಹೆಚ್ಚು ಸಮಯ ಸೂರ್ಯನನ್ನು ಮುಚ್ಚಿರಲಿದೆ. ಸಂಪೂರ್ಣ ಸೂರ್ಯ ಗ್ರಹಣದ ಸಮಯ ಬರೋಬ್ಬರಿ 7.5 ನಿಮಿಷಗಳಾಗಿದೆ. ಇಷ್ಟೊಂದು ದೀರ್ಘವಾಗಿ ಮುಚ್ಚಲ್ಪಟ್ಟಿದ್ದು, 1973ರಲ್ಲಿ ಎಂದು ದಾಖಲಾಗಿದೆ. 1973ರ ನಂತರ ನೂರಾರು ಬಾರಿ ಗ್ರಹಣವಾದರು ಇಷ್ಟೊಂದು ದೀರ್ಘಕಾಲ ಸೂರ್ಯನನ್ನು ಚಂದ್ರ ಆವರಿಸಿಕೊಂಡಿರಲಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ 7 ನಿಮಿಷ ಗ್ರಹಣದ ಸಮಯವಲ್ಲ ಬದಲಿಗೆ ಚಂದ್ರ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುವ ಸಮಯವಾಗಿದೆ. ಗ್ರಹಣ ಸಮಯ ಗಂಟಗಳ ಲೆಕ್ಕದಲ್ಲಿದೆ.

ಇದೇ ಕಾರಣಕ್ಕಾಗಿ ಈ ಬಾರಿಯ ಸೂರ್ಯ ಗ್ರಹಣವು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಸೌರ ವಿಜ್ಞಾನಿಗಳು ಆಕಾಶದಲ್ಲಿ ನಡೆಯುವ ಈ ಕೌತುಕ ಕಣ್ತುಂಬಿಕೊಳ್ಳಲು ಕಾತರದಿಂದ ಕಾದಿದ್ದಾರೆ. ಈ ಗ್ರಹಣವು ಟೆಕ್ಸಾಸ್, ಒಕ್ಲಹೋಮ, ಅರ್ಕಾನ್ಸಾಸ್, ಮಿಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವರ್ಮೊಂಟ್, ನ್ಯೂ ಹ್ಯಾಂಪ್‌ಶೈರ್ ಮತ್ತು ಮೈನೆ ರಾಜ್ಯಗಳಲ್ಲಿ ಸಂಪೂರ್ಣವಾಗಿ ಗೋಚರವಾಗಲಿದೆ. ಆದರೆ ಭಾರತದಲ್ಲಿ ಈ ಗ್ರಹಣ ಸಹ ಗೋಚರವಾಗುವುದಿಲ್ಲ.

2024ರಲ್ಲಿ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 25ರಂದು ಸಂಭವಿಸಲಿದೆ. ಇದಾದ 15 ದಿನಗಳಲ್ಲಿ ಚೈತ್ರ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಉಂಟಾಗಲಿದೆ. ಭೂಮಿ ಮತ್ತು ಚಂದ್ರನ ನಡುವೆ ಸೂರ್ಯ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ.

ಮಾರ್ಚ್ 25 ರಂದು ನಡೆಯಲಿರುವ ಪೆನಂಬ್ರಾಲ್ ಚಂದ್ರಗ್ರಹಣವು ಅತ್ಯಂತ ಚಿಕ್ಕದಾದ ಚಂದ್ರಗ್ರಹಣವಾಗಿದ್ದು, ಇದರಲ್ಲಿ ಚಂದ್ರನು ಭೂಮಿಯ ನೆರಳಿನ ಹೊರ ಅಂಚಿನಲ್ಲಿ ಹಾದುಹೋಗುತ್ತದೆ. ಇದು ಯುರೋಪ್, ಉತ್ತರ ಮತ್ತು ಪೂರ್ವ ಏಷ್ಯಾ, ಉತ್ತರ ಅಮೆರಿಕಾ, ದಕ್ಷಿಣ ಅಮೇರಿಕಾ, ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾದಿಂದ ಗೋಚರಿಸುತ್ತದೆ. ಅಂದರೆ ಭಾರತದಲ್ಲಿ ಈ ಚಂದ್ರಗ್ರಹಣ ಗೋಚರವಾಗುವುದಿಲ್ಲ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries