ತಿರುವನಂತಪುರಂ: ಸಂಜೆ 6 ರಿಂದ ರಾತ್ರಿ 11 ಗಂಟೆಯವರೆಗೆ 'ಪೀಕ್ ಟೈಮ್' ಸಮಯದಲ್ಲಿ ಅನಿವಾರ್ಯವಲ್ಲದ ವಿದ್ಯುತ್ ಉಪಕರಣಗಳನ್ನು ಕಾರ್ಯನಿರ್ವಹಿಸದಂತೆ ಜಾಗರೂಕತೆ ಪಾಲಿಸಲು ಕೆಎಸ್‍ಇಬಿ ತಿಳಿಸಿದೆ.
ಗಾಳಿಯಲ್ಲಿ ಉಷ್ಣತೆಯ ಹೆಚ್ಚಳದಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆಯಲ್ಲಿ ಹೆಚ್ಚಳ ಕಂಡುಬಂದಿದೆ ಮತ್ತು ಜಾಗತಿಕ ತಾಪಮಾನ ಸೇರಿದಂತೆ ಪರಿಸರದ ಪರಿಣಾಮಗಳನ್ನು ಕಡಿಮೆ ಮಾಡಲು ಬಳಕೆಯನ್ನು ಕಡಿಮೆ ಮಾಡಬೇಕು ಎಂಬ ಸಲಹೆಯನ್ನು ಕೆಎಸ್‍ಇಬಿ ಹಂಚಿಕೊಂಡಿದೆ. ಈ ಪೋಸ್ಟ್ ಅನ್ನು ಫೇಸ್‍ಬುಕ್ ಮೂಲಕ ಹಂಚಿಕೊಂಡಿದ್ದಾರೆ.
ಸಂಪೂರ್ಣ ಫೇಸ್ಬುಕ್ ಪೋಸ್ಟ್:
ಗಾಳಿಯ ಉಷ್ಣತೆಯು ಸ್ಥಿರವಾಗಿ ಏರುತ್ತಿರುವ ಕಾರಣ ಕೇರಳದಲ್ಲಿ ವಿದ್ಯುತ್ ಬಳಕೆ ಗಗನಕ್ಕೇರಿದೆ. ರಾಜ್ಯದಲ್ಲಿನ ಜಲವಿದ್ಯುತ್ ಯೋಜನೆಗಳಿಂದ ನಮ್ಮ ಅವಶ್ಯಕತೆಯ ಶೇಕಡಾ 30 ಕ್ಕಿಂತ ಕಡಿಮೆ ಉತ್ಪಾದಿಸಬಹುದು. ಉಳಿದ ಎಲ್ಲ ವಿದ್ಯುತ್ ನ್ನು ಕೆಎಸ್ ಇಬಿ ಹೊರ ರಾಜ್ಯದಿಂದ ಹೆಚ್ಚಿನ ಬೆಲೆಗೆ ಖರೀದಿಸಿ ಪೂರೈಸುತ್ತಿದೆ. ಇದರಲ್ಲಿ ಶೇಕಡಾ 80 ರಷ್ಟು ವಿದ್ಯುತ್ ಅನ್ನು ಉತ್ತರ ಭಾರತದ ಕಲ್ಲಿದ್ದಲು ಉಷ್ಣ ವಿದ್ಯುತ್ ಸ್ಥಾವರಗಳಿಂದ ಖರೀದಿಸಲಾಗುತ್ತದೆ. ಅಂತಹ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದಿಸುವುದರಿಂದ ಹೆಚ್ಚಿನ ಪ್ರಮಾಣದ ವಾಯು ಮಾಲಿನ್ಯ ಉಂಟಾಗುತ್ತದೆ ಎಂದು ಹೇಳಬೇಕಾಗಿಲ್ಲ ತಾನೇ. ಸತ್ಯವೆಂದರೆ ಉಷ್ಣ ವಿದ್ಯುತ್ ಸ್ಥಾವರಗಳು ಸಂಜೆ 6 ರಿಂದ ರಾತ್ರಿ 11 ರ ನಡುವಿನ ಪೀಕ್ ಅವರ್‍ಗಳಲ್ಲಿ ನಾವು ಬಳಸುವ ಹೆಚ್ಚಿನ ವಿದ್ಯುತ್ ಅನ್ನು ಉತ್ಪಾದಿಸುತ್ತವೆ.
ಆದ್ದರಿಂದ, ಜಾಗತಿಕ ತಾಪಮಾನ ಸೇರಿದಂತೆ ಪರಿಸರ ಪರಿಣಾಮಗಳನ್ನು ಕಡಿಮೆ ಮಾಡಲು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬೇಕಾಗಿದೆ.
ಪ್ರತಿಯೊಂದು ಅನಿವಾರ್ಯವಲ್ಲದ ವಿದ್ಯುತ್ ಉಪಕರಣಗಳನ್ನು ಸ್ವಿಚ್ ಆಫ್ ಮಾಡುವ ಮೂಲಕ, ವಿಶೇಷವಾಗಿ ಪೀಕ್ ಅವರ್‍ಗಳಲ್ಲಿ ಜಾಗೃತರಾಗಿರಬೇಕು. ನಾವು ಭೂಮಿ, ಮಾನವರು ಸೇರಿದಂತೆ ಜೀವಜಾಲಗಳು Àುತ್ತು ನಮ್ಮ ಭವಿಷ್ಯದ ಪೀಳಿಗೆಯ ಒಳಿತಿಗಾಗಿ ಹೆಜ್ಜೆ ಇಡಬೇಕಿದೆ.
ಅಗತ್ಯವಲ್ಲದ ವಿದ್ಯುತ್ ಉಪಕರಣಗಳನ್ನು ಸ್ವಿಚ್ ಆಫ್ ಮಾಡುವ ಬಗ್ಗೆ ಜಾಗೃತರಾಗಿ. ಪ್ರಕೃತಿಯನ್ನು ಉಳಿಸಿ ಮತ್ತು ಹಣವನ್ನು ಕೂಡಾ ಉಳಿಸಿ.