ತ್ರಿಶೂರ್: ಗುರುವಾಯೂರಿಗೆ ಗುರುವಾರ ದಾಖಲೆ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸತತ ರಜಾ ದಿನಗಳಿಂದ ಗುರುವಾಯೂರು ದೇವಸ್ಥಾನದಲ್ಲಿ ಜನಸಂದಣಿ ಹೆಚ್ಚಿತ್ತು. ಪರಿಣಾಮವಾಗಿ ದೇವಸ್ಥಾನದ ಆದಾಯವೂ ಹೆಚ್ಚಳಗೊಂಡಿದೆ.
ಮಾ.27 ಗುರುವಾರವೊಂದೇ ದಿನ ದೇವಾಲಯದ ಹುಂಡಿಯಲ್ಲಿ 64.59 ಲಕ್ಷ ರೂ.ಆದಾಯ ಗಳಿಸಿದೆ. ಆ ದಿನ 42 ವಿವಾಹಗಳು ಮತ್ತು 456 ಅನ್ನಪ್ರಾಶನಗಳು ನಡೆದಿವೆ. ತುಪ್ಪದ ದೀಪ ಕಾಣಿಕೆಯಿಂದ ಬರೋಬ್ಬರಿ 15.63 ಲಕ್ಷ ರೂ.ಆದಾಯ ಬಂದಿದೆ. 1000 ರೂಪಾಯಿ ಮೌಲ್ಯದ ತುಪ್ಪದ ದೀಪ ಸೇವೆ ನಡೆಸಿ, ನೈವೇದ್ಯ ಸೇವಿಸಿ 1560ಕ್ಕೂ ಹೆಚ್ಚು ಮಂದಿ ದರ್ಶನ ಪಡೆದರು. ತುಲಾಭಾರದ ಮೂಲಕ 17.43 ಲಕ್ಷ ರೂ.ಸಂಗ್ರಹವಾಗಿದೆ. ಹಾಲುಪಾಯಸ À ನೈವೇದ್ಯದ ಮೂಲಕ 6.57 ಲಕ್ಷ ರೂ.ಲಭಿಸಿದೆ.
ಶುಕ್ರವಾರ ಬೆಳಗ್ಗೆಯಿಂದಲೇ ದರ್ಶನಕ್ಕೆ ನೂಕು ನುಗ್ಗಲು ಉಂಟಾಗಿತ್ತು. ಮಧ್ಯಾಹ್ನದ ಪೂಜೆಯ ನಂತರ 2.15ಕ್ಕೆ ಗರ್ಭಗೃಹ ಮುಚ್ಚಲಾಯಿತು. 3.30ಕ್ಕೆ ಮತ್ತೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬೇಸಿಗೆ ರಜೆಯ ಅಂಗವಾಗಿ ದರ್ಶನದ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದೆ.