ಕಾಸರಗೋಡು: ಸಾಮಾಜಿಕ ಪರಿವರ್ತನೆಯಲ್ಲಿ ಶಿಕ್ಷಣದ ಪಾತ್ರ ಮಹ್ವದ್ದಾಗಿದೆ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಡಾ. ಸಿವಿ. ಆನಂದ ಬೋಸ್ ತಿಳಿಸಿದ್ದಾರೆ.
ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನ 7ನೇ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸರಿಯಾದ ಶಿಕ್ಷಣವು ಆ ಸಮಯದಲ್ಲಿ ಸರಿಯಾದ ಕೆಲಸವನ್ನು ಮಾಡಲು ಅನುವು ಮಾಡಿಕೊಡಬೇಕು. ಶಿಕ್ಷಣ ಸ್ವಾತಂತ್ರ್ಯ, ಸಬಲೀಕರಣ ಮತ್ತು ಸಂಪನ್ನತೆಯ ಪ್ರತೀಕವಾಗಿದೆ. ವಿಶ್ವ ವಿದ್ಯಾಲಯದ ಪ್ರತಿಯೊಬ್ಬ ಪದವೀಧರನೂ ಸಮಾಜದಲ್ಲಿ ಬದಲಾವಣೆ ತಂದುಕೊಳ್ಳುವ ಭವಿಷ್ಯದ ನೇತಾರರಗಬೇಕು. ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಮಹಿಳೆಯರು ಸುಶಿಕ್ಷಿತರಾಗುವ ಮೂಲಕ ಸಮಾಜ ಮತ್ತು ದೇಶ ಶೈಕ್ಷಣಿಕವಾಗಿ ಮುಂಚೂಣಿಗೆ ಬರಲು ಸಾಧ್ಯ. ಭವಿಷ್ಯದಲ್ಲಿ ನಾರಿಶಕ್ತಿ ದೇಶವನ್ನು ಮುನ್ನಡೆಸಲಿದೆ ಎಂದು ತಿಳಿಸಿದರು.
ರಿಜಿಸ್ಟ್ರಾರ್ ಡಾ. ಎಂ. ಮುರಳೀಧರನ್ ನಂಬಿಯಾರ್, ವಿಶ್ವವಿದ್ಯಾಲಯದ ನ್ಯಾಯಾಲಯದ ಸದಸ್ಯರು, ಕಾರ್ಯಕಾರಿ ಮಂಡಳಿ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಹಣಕಾಸು ಸಮಿತಿ ಸದಸ್ಯರು, ಸಾರ್ವಜನಿಕ ಪ್ರತಿನಿಧಿಗಳು, ಡೀನ್‍ಗಳು, ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಭಾರ ಉಪಕುಲಪತಿ ಪೆÇ್ರ. ಕೆ.ಸಿ. ಬೈಜು ಸ್ವಾಗತಿಸಿ, ಶೈಕ್ಷಣಿಕ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯದ ಪ್ರಗತಿ ಮತ್ತು ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸಿದರು. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಆರ್. ಜಯಪ್ರಕಾಶ್ ವಂದಿಸಿದರು. ವಿಶ್ವ ವಿದ್ಯಾಲಯ ಕ್ಯಾಂಪಸ್‍ನ ವಿವೇಕಾನಂದ ವೃತ್ತದ ಬಳಿ ವಿಶೇಷವಾಗಿ ಸಿದ್ಧಪಡಿಸಿದ ವೇದಿಕೆಯಲ್ಲಿ ನಡೆದ ಅದ್ಧೂರಿ ಸಮಾರಂಭಕ್ಕೆ 1500 ಕ್ಕೂ ಹೆಚ್ಚು ಜನರು ಸಾಕ್ಷಿಯಾದರು.
2023ರಲ್ಲಿ ವ್ಯಾಸಂಗ ಪೂರ್ಣಗೊಳಿಸಿದ ಒಟ್ಟು 957 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 40 ಜನರಿಗೆ ಪದವಿ, 843 ಮಂದಿಗೆ ಸ್ನಾತಕೋತ್ತರ ಪದವಿ, 58 ಮಂದಿಗೆ ಪಿಎಚ್ ಡಿ ಪದವಿ ಹಾಗೂ 16 ಮಂದಿಗೆ ಪಿಜಿ ಡಿಪೆÇ್ಲಮಾ ಪದವಿ ಪ್ರದಾನ ಮಾಡಲಾಯಿತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಪದವಿ ಪ್ರಮಾಣ ಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದರು. ಬಿಳಿ ಡ್ರೆಸ್ ಜೊತೆಗೆ ವಿವಿಧ ಬಣ್ಣದ ಶಾಲುಗಳು ಕೂಡ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ರಾಜ್ಯಪಾಲರ ಅಚ್ಚರಿಯ ಕೊಡುಗೆ:
ಪದವಿ ಪ್ರದಾನ ಸಮಾರಂಭದಲ್ಲಿ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ವಿಶ್ವವಿದ್ಯಾಲಯಕ್ಕೆ ಅಚ್ಚರಿಯ ಉಡುಗೊರೆಯಾಗಿ ಪ್ರಶಸ್ತಿಗಳನ್ನು ಘೋಷಿಸಿದರು. ವಿಶ್ವವಿದ್ಯಾಲಯದ ಪ್ರಥಮ ಉಪಕುಲಪತಿ ಪೆÇ್ರ. ಝಾನ್ಸಿ ಜೇಮ್ಸ್, ಅತ್ಯುತ್ತಮ ವಿದ್ಯಾರ್ಥಿ, ಉತ್ತಮ ಶಿಕ್ಷಕ ಮತ್ತು ಅತ್ಯುತ್ತಮ ಸಿಬ್ಬಂದಿ ವಿಭಾಗಗಳಲ್ಲಿ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಬಂಗಾಳ ರಾಜಭವನದ ಕಡೆಯಿಂದ ರಾಜ್ಯಪಾಲರು ಘೋಷಿಸಿದರು. ವಿಶ್ವ ವಿದ್ಯಾಲಯದ ಮೊದಲ ಉಪಕುಲಪತಿ ಪ್ರಶಸ್ತಿಗಾಗಿ ಫಲಕ ಮತ್ತು ಪ್ರಶಸ್ತಿ ಪತ್ರದೊಂದಿಗೆ 50000 ರೂ. ನಗದು, ಇತರ ಉಪ ಕುಲಪತಿಗಳಿಗೆ 25000ರೂ. ನಗದು, ಫಲಕ ಮತ್ತು ಪ್ರಮಾಣಪತ್ರ ಲಭಿಸಲಿದ್ದು, ನಂತರದ ಪ್ರಶಸ್ತಿಗಳನ್ನು ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ. ರಾಜ್ಯಪಾಲರ ಎಡಿಸಿ ಮೇಜರ್ ನಿಖಿಲ್ ಕುಮಾರ್ ವೇದಿಕೆಯಲ್ಲಿ ಈ ಘೋಷಣೆ ಮಾಡಿದರು. ಕಾಸರಗೋಡಿನ ಅಪರ ಜಿಲ್ಲಾಧಿಕಾರಿಯಗಿ ತಾನು ವೃತ್ತಿ ಜೀವನ ಆರಂಭಿಸಿದ್ದು, ಕಾಸರಗೋಡಿಗೆ ಆಗಮಿಸುವುದು ತವರಿಗೆ ಆಗಮಿಸುವ ಖುಷಿ ತಂದುಕೊಡುತ್ತಿರುವುದಾಗಿ ರಾಜ್ಯಪಾಲ ಡಾ. ಸಿವಿ. ಆನಂದ ಬೋಸ್ ತಿಳಿಸಿದರು. ಮೊದಲ ಬಾರಿಗೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಿದ್ದೇನೆ. ಆದರೆ ಮೊದಲ ಉಪಕುಲಪತಿ ಪೆÇ್ರ. ಜಾನ್ಸಿ ಜೇಮ್ಸ್ ಆರಂಭದಿಂದಲೂ ವಿಷಯಗಳನ್ನು ಚರ್ಚಿಸುತ್ತಿದ್ದರು. ವಿಶ್ವ ವಿದ್ಯಾಲಯಕ್ಕೆ ಭೂಮಿ ಸಮಸ್ಯೆ ಸೇರಿದಂತೆ ನಡೆದ ಚರ್ಚೆ ಹಾಗೂ ಪ್ರಯತ್ನಗಳನ್ನು ರಾಜ್ಯಪಾಲರು ಸ್ಮರಿಸಿದರು.
ಚಿನ್ನದ ಪದಕ:
ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಚಿನ್ನದ ಪದಕ ಪ್ರದಾನ ಮಾಡಿದರು. ಅಖಿಲಾ ಕೆ.ವಿ (ವಾಣಿಜ್ಯ ಮತ್ತು ಅಂತರರಾಷ್ಟ್ರೀಯ ವ್ಯಾಪಾರ) ಮತ್ತು ಅಮೃತ ಎ.ಎಸ್. (ಮ್ಯಾನೇಜ್‍ಮೆಂಟ್ ಸ್ಟಡೀಸ್) ಮತ್ತು ಅನುಷಾ ಕೆ (ಗಣಿತ) ಅವರಿಗೆ ಚಿನ್ನದ ಪದಕ ವಿತರಿಸಲಾಯಿತು.