ನವದೆಹಲಿ: ಯುಕೊ ಬ್ಯಾಂಕ್‌ನ ₹820 ಕೋಟಿ ಐಎಂಪಿಎಸ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮತ್ತು ಮಹಾರಾಷ್ಟ್ರದ 7 ನಗರಗಳ 67 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ನವದೆಹಲಿ: ಯುಕೊ ಬ್ಯಾಂಕ್‌ನ ₹820 ಕೋಟಿ ಐಎಂಪಿಎಸ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮತ್ತು ಮಹಾರಾಷ್ಟ್ರದ 7 ನಗರಗಳ 67 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ ವರ್ಷದ ನವೆಂಬರ್ 10ರಿಂದ 13ರವರೆಗಿನ ಅವಧಿಯಲ್ಲಿ ಮಾಡಲಾದ 8,53,049 ಐಎಂಪಿಎಸ್ (ಶೀಘ್ರ ಪಾವತಿ ವ್ಯವಸ್ಥೆ) ವಹಿವಾಟಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
'7 ಖಾಸಗಿ ಬ್ಯಾಂಕ್‌ಗಳ 14,600 ಖಾತೆಗಳಲ್ಲಿ ಮಾಡಲಾದ ಐಎಂಪಿಎಸ್ ವರ್ಗಾವಣೆಯನ್ನು ತಪ್ಪಾಗಿ ಯೂಕೊ ಬ್ಯಾಂಕ್‌ನ 41,000 ಖಾತೆಗಳಿಗೆ ತಿರುಗಿಸಲಾಗಿದೆ. ಮೂಲ ಬ್ಯಾಂಕ್‌ಗಳಿಂದ ಹಣ ಡೆಬಿಟ್ ಆಗದೆ ಯುಕೊ ಬ್ಯಾಂಕ್‌ಗೆ ₹820 ಕೋಟಿ ವರ್ಗಾವಣೆಯಾಗಿದೆ' ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ರಾಜಸ್ಥಾನ ಮತ್ತು ಮಹಾರಾಷ್ಟ್ರಗಳಲ್ಲಿ ಖಾತೆಗೆ ಹಣ ಪಡೆದ ಖಾತೆದಾರರು ಹಣವನ್ನು ಹಿಂದಿರುಗಿಸದೆ, ಅದನ್ನು ವಿತ್‌ಡ್ರಾ ಮಾಡಿದ್ದರು. ಈ ಸಂಬಂಧಿತ ವ್ಯಕ್ತಿಗಳ ಮನೆ ಮೇಲೆ ನಡೆದ 2ನೇ ದಾಳಿ ಇದಾಗಿದೆ.
ಈ ಹಿಂದೆ 2023ರ ಡಿಸೆಂಬರ್‌ನಲ್ಲಿ, ಖಾಸಗಿ ವ್ಯಕ್ತಿಗಳು ಮತ್ತು ಯುಕೊ ಬ್ಯಾಂಕ್ ಅಧಿಕಾರಿಗಳ ಮನೆ ಮೇಲೆ ಕೋಲ್ಕತ್ತ ಮತ್ತು ಮಂಗಳೂರಿನಲ್ಲಿ ದಾಳಿ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ವೇಳೆ, ಯುಕೊ ಬ್ಯಂಕ್ ಮತ್ತು ಐಡಿಎಫ್‌ಸಿ ಬ್ಯಾಂಕ್‌ಗಳಿಗೆ ಸಂಬಂಧಿಸಿದ 139 ದಾಖಲೆ ಪತ್ರಗಳು, 43 ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.