ಪಾಲಕ್ಕಾಡ್ : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧರೊಬ್ಬರಿಗೆ ಕೇರಳ ನ್ಯಾಯಾಲಯವು ಒಟ್ಟಾರೆಯಾಗಿ 83 ವರ್ಷ ಜೈಲು ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ.
ಪಾಲಕ್ಕಾಡ್ : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧರೊಬ್ಬರಿಗೆ ಕೇರಳ ನ್ಯಾಯಾಲಯವು ಒಟ್ಟಾರೆಯಾಗಿ 83 ವರ್ಷ ಜೈಲು ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ.
ಗರಿಷ್ಠ 40 ವರ್ಷಗಳವರೆಗೆ ಮಾತ್ರ ವ್ಯಕ್ತಿಯೊಬ್ಬರು ಜೈಲಿನಲ್ಲಿ ಇರಬಹುದಾಗಿರುವುದರಿಂದ ಈ ಪ್ರಕರಣದ ಅಪರಾಧಿಗೂ ಅದು ಅನ್ವಯವಾಗಲಿದೆ ಎಂದೂ ಹೇಳಿದೆ.
ಪ್ರಕರಣದ ವಿಚಾರಣೆ ನಡೆಸಿದ ಪಟ್ಟಾಂಬಿ ತ್ವರಿತ ಗತಿ ವಿಶೇಷ ನ್ಯಾಯಾಲಯ (ಎಫ್‌ಐಎಸ್‌ಸಿ)ದ ನ್ಯಾಯಾಧೀಶ ರಾಮು ರಮೇಶ್ ಚಂದ್ರ ಭಾನು ಅವರು, ಅಪರಾಧಿಗೆ ಜೈಲು ಶಿಕ್ಷೆಯೊಂದಿಗೆ ₹4.3 ಲಕ್ಷ ದಂಡ ವಿಧಿಸಿದ್ದು, ಆ ಹಣವನ್ನು ಸಂತ್ರಸ್ತೆಗೆ ನೀಡುವಂತೆ ತೀರ್ಪು ನೀಡಿದ್ದಾರೆ.
'ಅಪರಾಧಿ 65 ವರ್ಷದ ವೃದ್ಧ ತನ್ನ ಸಂಬಂಧಿ 16 ವರ್ಷದ ಬಾಲಕಿಗೆ ಆಕೆಯ ಮನೆಯಲ್ಲೇ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಒಡ್ಡಿದ್ದ' ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.
'ಸಂತೃಸ್ತ ಬಾಲಕಿಯು ತನ್ನ ಮೇಲೆ ದೌರ್ಜನ್ಯವಾಗಿರುವ ಬಗ್ಗೆ ಶಿಕ್ಷಕಿಯೊಬ್ಬರಿಗೆ ತಿಳಿಸಿದ್ದಳು. ಬಳಿಕ ಪ್ರಕರಣವು ಮಕ್ಕಳ ಸೇವಾ ಇಲಾಖೆಯ ಗಮನಕ್ಕೆ ಬಂದಿದ್ದು, ಅವರ ಮಾಹಿತಿಯ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು' ಎಂದು ಮಾಹಿತಿ ನೀಡಿದ್ದಾರೆ.