ನವದೆಹಲಿ :ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ, ಶೇ.40ಕ್ಕಿಂತ ಅಧಿಕ ಅಂಗವೈಕಲ್ಯ ಇರುವವರಿಗೆ ಮನೆಯಿಂದಲೇ ಮತದಾನ ಮಾಡಲು ಸಾಧ್ಯವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಶನಿವಾರ ಪ್ರಕಟಿಸಿದ್ದಾರೆ.

'' 85 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗಾಗಿ ಅವರ ಮನೆಗೇ ಮತವನ್ನು ಕೊಂಡೊಯ್ಯಲು ನಾವು ಸಿದ್ಧರಾಗಿದ್ದೇವೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಕ್ಕೆ ಮೊದಲು ನಾವು 85 ವರ್ಷ ಮೇಲ್ಪಟ್ಟವರಿಗೆ 12 ಡಿ ಫಾರಂ ಅನ್ನು ಕಳುಹಿಸಿಕೊಡಲಿದ್ದೇವೆ. ಮನೆಯಿಂದ ಮತದಾನ ಮಾಡುವ ಆಯ್ಕೆಯನ್ನು ಅವರು ಆಯ್ದುಕೊಂಡಲ್ಲಿ, ಅವರಿಗೆ ಮನೆಯಲ್ಲೇ ಮತದಾನದ ಸೌಲಭ್ಯವನ್ನು ನಾವು ಒದಸಲಿದ್ದೇವೆ ''ಎಂದವರು ಹೇಳಿದ್ದಾರೆ. ಈ ಪ್ರಯೋಗವನ್ನು ನಾವು ದೇಶದ ಕೆಲವು ಭಾಗಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಪ್ರಯತ್ನಿಸಿದ್ದೆವು. ಆದರೆ ಇದೇ ಮೊಲ ಬಾರಿ ಲೋಕಸಭಾ ಚುನಾವಣೆಗೆ ಇದನ್ನು ನಾವು ದೇಶಾದ್ಯಂತ ಜಾರಿಗೊಳಿಸುತ್ತಿದ್ದೇವೆ'' ಎಂದು ಕುಮಾರ್ ತಿಳಿಸಿದರು. ಒಂದು ವೇಳೆ ಮತಗಟ್ಟೆಗೆ ಬರಲು ಅವರು ಇಚ್ಛಿಸಿದಲ್ಲಿ ಅವರಿಗೆ ಸ್ವಯಂಸೇವಕರು ಹಾಗೂ ಗಾಲಿ ಕುರ್ಚಿಗಳನ್ನು ಒದಗಿಸಿಕೊಡಲಿದ್ದೇವೆ'' ಎಂದವರು ಹೇಳಿದ್ದಾರೆ.
ದೇಶದಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ 85 ಲಕ್ಷಕ್ಕೂ ಅಧಿಕ ಮತದಾರರಿದ್ದರೆ, 88.4 ಭಿನ್ನಸಾಮರ್ಥ್ಯದ ಮತದಾರರಿದ್ದಾರೆ. ಒಟ್ಟು 21.18 ಲಕ್ಷ ಶತಾಯುಷಿ ಮತದಾರರಿದ್ದಾರೆ ಎಂದವರು ಹೇಳಿದರು.