ನವದೆಹಲಿ: ನಕಲಿ ಕ್ಯಾನ್ಸರ್ ಔಷಧ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ ದೆಹಲಿ ಅಪರಾಧ ವಿಭಾಗ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ.
ನವದೆಹಲಿ: ನಕಲಿ ಕ್ಯಾನ್ಸರ್ ಔಷಧ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ ದೆಹಲಿ ಅಪರಾಧ ವಿಭಾಗ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾಹಿತಿ ಹಂಚಿಕೊಂಡಿರುವ ಅಪರಾಧ ವಿಭಾಗದ ವಿಶೇಷ ಪೊಲಿಸ್ ಆಯುಕ್ತೆ ಶಾಲಿನಿ ಸಿಂಗ್, 'ಮಾರುಕಟ್ಟೆಯಲ್ಲಿ ನಕಲಿ ಕ್ಯಾನ್ಸರ್ ಔಷಧ ಮಾರಾಟವಾಗುತ್ತಿದ್ದ ಖಚಿತ ಮಾಹಿತಿ ಬಂದಿತ್ತು.
ಮೋತಿ ನಗರದಲ್ಲಿ 2 ಫ್ಲಾಟ್‌ಗಳಲ್ಲಿ ಖಾಲಿ ಬಾಟಲಿಗಳಲ್ಲಿ ನಕಲಿ ಔಷಧ ತುಂಬಿಸುವ ಕೆಲಸ ನಡೆಯುತ್ತಿತ್ತು. ಅವರು ₹100ರ ನಕಲಿ ಇಂಜೆಕ್ಷನ್ ದ್ರವಗಳನ್ನು ಖರೀದಿಸಿ ಕ್ಯಾನ್ಸರ್ ಔಷಧದ ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದರು. ಈ ನಕಲಿ ಔಷಧ ಮಾರಾಟ ಜಾಲ ಬಿಹಾರದವರೆಗೂ ವಿಸ್ತರಿಸಿದೆ. ಅಲ್ಲಿಗೂ ನಮ್ಮ ತಂಡ ಹೋಗಿದ್ದು ಸಮಗ್ರ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.