HEALTH TIPS

ಪಟ್ಲ ಪೌಂಡೇಶನ್ ಕುಂಬಳೆ ಘಟಕದ 8ನೇ ವಾರ್ಷಿಕೋತ್ಸ

                   ಕುಂಬಳೆ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಕುಂಬಳೆ ಘಟಕದ ಎಂಟನೇ ವಾರ್ಷಿಕೋತ್ಸವ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಾಲಯದ ಜಾತ್ರಾ ಮಹೋತ್ಸವದ0ದು ದೇವಾಲಯದ ಆಡಳಿತ ಮಂಡಳಿ ಮತ್ತು ಸೇವಾ ಸಮಿತಿಯ ಸಹ ಯೋಗದೊಂದಿಗೆ ಇತ್ತೀಚೆಗೆ ಜರಗಿತು.

                  ಈ ಸಂದರ್ಭದಲ್ಲಿ ಫೌಂಡೇಷನ್ ಕುಂಬಳೆ  ಘಟಕದ ನಿಕಟ ಪೂರ್ವ ಅಧ್ಯಕ್ಷ ಜಗನ್ನಾಥ ಶೆಟ್ಟಿ ಯವರನ್ನು ಸನ್ಮಾನಿಸಿ ನೂತನ ಅಧ್ಯಕ್ಷರನ್ನಾಗಿ ಕೆ.ಕೆ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ಮೇಳದ ಯುವ ಕಲಾವಿದ ಮಡಂದೂರು ರಂಜಿತ್ ರೈ ಯವರಿಗೆ ಪಟ್ಲ ಫೌಂಡೇಷನ್ ಕುಂಬಳೆ ಘಟಕದ ವತಿಯಿಂದ ಧನ ಸಹಾಯ ನೀಡಲಾಯಿತು.

           ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರು ಆಶಯವನ್ನು ಪ್ರಸ್ತಾಪಿಸಿ ಮಾತನಾಡಿದರು.


               ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ಶ್ರೀಕ್ಷೇತ್ರ ಅನಂತಪುರದ ಟ್ರಸ್ಟಿ ಜಯಪ್ರಕಾಶ್ ಶೆಟ್ಟಿ ನಾರಾಯಣಮಂಗಲ, ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ರವಿರಾಜ ಕುಂಟಂಗೇರಡ್ಕ ಮುಖ್ಯ ಅತಿಥಿ ಗಳಾಗಿದ್ದರು.

            ಕುಂಬಳೆ ಘಟಕದ ಗೌರವಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಉಪಾಧ್ಯಕ್ಷರಾದ ಜಯಪ್ರಸಾದ್ ರೈ ಕಾರಿಂಜ, ಲೋಕನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಕೇಶ್ ಭಂಡಾರಿ, ಕೋಶಾಧಿಕಾರಿ ವೈ.ರಾಘವೇಂದ್ರ ಪ್ರಸಾದ್ ನಾಯಕ್ ಬದಿಯಡ್ಕ, ಕಾರ್ಯದರ್ಶಿ ಅವಿನಾಶ್ ಕಾರಂತ್, ವೇಣುಗೋಪಾಲ್ ಶೆಟ್ಟಿ, ಮುರಳೀಧರ್ ಯಾದವ್, ಕುಂಬಳೆ ಫಟಕದ ಸಂಚಾಲಕ ದಿವಾಣ ಶಿವಶಂಕರ ಭಟ್, ಕುಂಬಳೆ ತ್ರಿಶೂಲ್ ಕ್ರಿಕೆಟರ್ಸ್‍ನ ನಟರಾಜ್ ಆಳ್ವ, ವಿನೋದ್ ರಾವ್, ದಿನಕರ್ ಶೆಟ್ಟಿ, ಟೈಗರ್ ಬಾಯ್ಸ್ ಕಂಚಿಕಟ್ಟೆಯ ಯಶವಂತ್ ಹೆಗ್ಡೆ ಮತ್ತು ಮಳಿ ಪ್ರಶಾಂತ್ ಗಟ್ಟಿ ಸಹಕರಿಸಿದರು. ಕಾರ್ಯಾಧ್ಯಕ್ಷ ಮಂಜುನಾಥ ಆಳ್ವ ಮಡ್ವ ಸ್ವಾಗತಿಸಿ, ಘಟಕದ ಪ್ರಧಾನ ಸಂಚಾಲಕ ಪೃಥ್ವಿರಾಜ್ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ನಿರಂಜನ ಕುಮಾರ್ ರೈ ಪೆರಡಾಲಗುತ್ತು ಕಾರ್ಯಕ್ರಮ ನಿರೂಪಿಸಿದರು.

           ಬಳಿಕ ನಾಗವೃಜ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ "ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ" ಯಕ್ಷಗಾನ ಕಥಾಭಾಗದ ಪ್ರದರ್ಶನ ನಡೆಯಿತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries