ಮಧೂರು:ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ಕ್ಷೇತ್ರದಲ್ಲಿ ಮಾರ್ಚ್ 8ರಂದು ಶಿವರಾತ್ರಿ ಮಹೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ಉಳಿಯುತ್ತಾಯ ವಿಷ್ಣು ಅಸ್ರರ ಮುಖ್ಯ ನೇತೃತ್ವದಲ್ಲಿ ನಡೆಯಲಿದೆ.
ಇದರ ಅಂಗವಾಗಿ ಕ್ಷೇತ್ರದಲ್ಲಿ ಬೆಳಿಗ್ಗೆ ಉಷಃ ಪೂಜೆ, ಗಣಪತಿ ಹೋಮ, ರುದ್ರಾಭಿಷೇಕ, ನವಕಾಭಿಷೇಕ, ಭಜನೆ ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ, ಸಂಜೆ ದೀಪಾರಾಧನೆ, ರಾತ್ರಿ ಮಹಾ ಪೂಜೆ ಉತ್ಸವ ಬಲಿ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಮೃತ ಕಲಾಕ್ಷೇತ್ರ ಕೂಡ್ಲು ಇವರಿಂದ "ಶಾಸ್ತ್ರೀಯ ನೃತ್ಯ" ಕಾರ್ಯಕ್ರಮ 9:30 ತರುಣ ಕಲಾವೃಂದ, ಕುಟುಂಬಶ್ರೀ ಪರಕ್ಕಿಲ,ಇವರ ಸಹಕಾರದೊಂದಿಗೆ ಮಹಾದೇವ ಬಾಲ ಗೋಕುಲ ವಿದ್ಯಾರ್ಥಿಗಳ "ನೃತ್ಯ ಕಾರ್ಯಕ್ರಮ ". ರಾತ್ರಿ 10 ಗಂಟೆಗೆ "ಭರತನಾಟ್ಯ ನೃತ್ಯ ಕೀರ್ತನ" ಪ್ರದರ್ಶನ ಶ್ರೀಮತಿ ಧನ್ಯಾ ಮುರಳಿ ಅಸ್ರ ಇವರಿಂದ.ರಾತ್ರಿ 10:30ಗೆ ದೇವರ ಉತ್ಸವ ಬಲಿಯು ಶ್ರೀ ಧನ್ವಂತರಿ ಸನ್ನಿಧಿಗೆ ತೆರಳಿ, ಹಿಂತಿರುಗಿ ಬಂದು ಪರಕ್ಕಿಲ ಬೆಡಿ ಕಟ್ಟೆಯಲ್ಲಿ ಸಿಡಿ ಮದ್ದು ಪ್ರದರ್ಶನ, ರಾಜಾಂಗಣ ಪ್ರಸಾದ ಮತ್ತು ಶ್ರೀ ಶಾಸ್ತಾ ಪಾಟ್ ಉತ್ಸವ ಜರುಗಲಿರುವುದು. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತ ಮಹಾಶಯರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಕ್ಷೇತ್ರ ಸೇವಾ ಸಮಿತಿ ಮತ್ತು ಆಡಳಿತ ಮೊಕ್ತೇಸರರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.