ನವದೆಹಲಿ: ಮೊಬೈಲ್ ಸಂಪರ್ಕವನ್ನು ಸ್ಥಗಿತಗೊಳಿಸುವ ಅಥವಾ ಮೊಬೈಲ್ ಸಂಖ್ಯೆ ದುರ್ಬಳಕೆಯಾಗುತ್ತಿದೆ ಎಂದು ಹೇಳುವ ಕರೆಗಳು ವಿದೇಶಿ ಮೂಲದ ಸಂಖ್ಯೆಯಿಂದ ಬರುತ್ತಿದ್ದು, ಈ ಕುರಿತು ಮೊಬೈಲ್ ಬಳಕೆದಾರರು ಜಾಗೃತರಾಗಿರುವಂತೆ ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದೆ.

+92-xxxxxxxxxx ಸಂಖ್ಯೆಯಿಂದ ಬರುವ ಕರೆ ಇದಾಗಿದೆ.
'ದೂರಸಂಪರ್ಕ ಇಲಾಖೆಯಿಂದ ಮಾಡುತ್ತಿರುವ ಕರೆ' ಎಂದು ಹೇಳುತ್ತಿರುವ ಈ ಸಂಖ್ಯೆಯ ಬಳಕೆದಾರರು, ಸೈಬರ್ ದಾಳಿ ನಡೆಸುವ ಅಪಾಯ ಕಂಡುಬಂದಿದೆ. ಹಣವನ್ನು ದೋಚುವ ಸಾಧ್ಯತೆಯೂ ಹೆಚ್ಚು. ಇಂಥ ಕರೆಗಳನ್ನು ಮಾಡುವಂತೆ ಯಾವುದೇ ಸಂಸ್ಥೆಗೆ ದೂರ ಸಂಪರ್ಕ ಇಲಾಖೆ ಯಾವುದೇ ಸೂಚನೆ ನೀಡಲ್ಲ ಮತ್ತು ಕರೆಗಳನ್ನು ಮಾಡುತ್ತಿಲ್ಲ. ಇಂಥ ವಂಚನೆಗೆ ಒಳಗಾದಲ್ಲಿ ಅಥವಾ ತಿಳಿಸಿರುವ ಸಂಖ್ಯೆಗಳಿಂದ ಕರೆಗಳು ಬಂದಲ್ಲಿ ಅವುಗಳ ವಿರುದ್ಧ www.sancharsaathi.gov.in ಅಂತರ್ಜಾಲ ತಾಣದಲ್ಲಿ ದೂರು ದಾಖಲಿಸಬೇಕು' ಎಂದು ತಿಳಿಸಿದೆ.
ಜತೆಗೆ ಸಹಾಯವಾಣಿ 1930ಗೆ ಕರೆ ಮಾಡಬಹುದು. ವಂಚಕರ ದಾಳಿಗೆ ಒಳಗಾಗಿದ್ದರೆ www.cybercrime.gov.in ಅಂತರ್ಜಾಲ ತಾಣದಲ್ಲೂ ದೂರು ದಾಖಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.