ಕುಂಬಳೆ: ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಮಹಿಳೆಯ ಉದರದಿಂದ ಭರೋಬ್ಬರಿ 9.8ಕಿ.ಗ್ರಾಂ ತೂಕದ ಮಾಂಸದ ಗಡ್ಡೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಕಳೆದ ಕೆಲವು ತಿಂಗಳಿಂದ ಉದರ ಉಬ್ಬರಿಸಿದ ಸ್ಥಿತಿಯಲ್ಲಿದ್ದುದರಿಂದ ತಪಾಸಣೆಗಾಗಿ ಆಸ್ಪತ್ರೆಗೆ ಆಗಮಿಸಿದಾಗ ಗಡ್ಡೆ ಹೊಂದಿರುವುದು ಪತ್ತೆಯಾಗಿತ್ತು. ಈ ಹಿಂದೆ ನಾಲ್ಕು ಬಾರಿ ಹೆರಿಗೆ ಶಸ್ತ್ರಚಿಕಿತ್ಸೆ, ಅಪೆಂಡೈಟೀಸ್, ಹರ್ನಿಯಾ ಸೇರಿದಂತೆ ವಿವಿಧ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಮಹಿಳೆಗೆ ಈ ಬಾರಿಯದ್ದು, ಏಳನೇ ಶಸ್ತ್ರಚಿಕಿತ್ಸೆಯಾಗಿತ್ತು. ತಜ್ಞ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಮಹಿಳೆ ಆರೋಗ್ಯವಂತರಾಘಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.